ನವದೆಹಲಿ: ಪಾಕಿಸ್ತಾನಿ ಕಲಾವಿದರ ವಿವಾದಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರು, ಭಾರತದಲ್ಲಿ ಪಾಕ್ ನಟ, ನಟಿಯರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ಪಾಕ್ ಕಲಾವಿದರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ ಅವರು, ಈ ನಟರು ಪಾಕಿಸ್ತಾನದಂತಹ ವಿರೋಧಿ ರಾಷ್ಟ್ರಗಳಲ್ಲಿ ನಮ್ಮ ಉತ್ತಮ ರಾಯಭಾರಿಗಳಾಗುತ್ತಾರೆ ಎಂದಿದ್ದಾರೆ.
19 ಯೋಧರನ್ನು ಬಲಿಪಡೆದ ಉರಿ ಉಗ್ರ ದಾಳಿ ಮತ್ತು ಅದರ ನಂತರ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ನಂತರ ಭಾರತ-ಪಾಕ್ ಮಧ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದಲ್ಲಿ ಪಾಕ್ ಕಲಾವಿದರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ನಿನ್ನೆಯಷ್ಟೆ ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಏ ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆಗೆ ಕೆಲವು ಥಿಯೇಟರ್ ಮಾಲೀಕರು ನಿರಾಕರಿಸಿದ್ದರು.