ಬಿಹಾರದಲ್ಲಿ ಕೋಮುಗಲಭೆ: ಹಲವು ಜಿಲ್ಲೆಗಳಲ್ಲಿ ಉದ್ನಿಗ್ನ ವಾತಾವರಣ

ದುರ್ಗಾಮೂರ್ತಿ ವಿಸರ್ಜನೆ ಹಾಗೂ ಮೊಹರಂ ಮೆರವಣಿಗೆ ವೇಳೆ ಜನರ ಘರ್ಷಣೆ ಏರ್ಪಟ್ಟಿದ್ದು, ಬಿಹಾರದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪಾಟ್ನ: ದುರ್ಗಾಮೂರ್ತಿ ವಿಸರ್ಜನೆ ಹಾಗೂ ಮೊಹರಂ ಮೆರವಣಿಗೆ ವೇಳೆ ಜನರ ಘರ್ಷಣೆ ಏರ್ಪಟ್ಟಿದ್ದು, ಬಿಹಾರದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಘರ್ಷಣೆ ವೇಳೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗೋಪಾಲ್ಗಂಜ್, ಭೋಜ್ಪುರ್, ಮಧುಬಾನಿ, ಪೂರ್ವ ಚಂಪಾರಣ್, ಮಧೇಪುರ ಮತ್ತು ಕೃಷ್ಣಗಂಜ್ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ರೈಲ್ವೇ ಸಂಚಾರ, ಮಾರುಕಟ್ಟೆ ವ್ಯವಹಾರಗಳು, ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದ 54 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಗೋಪಾಲ್ಗಂಡ್ ಟೌನ್ ನಲ್ಲಿ ನಡೆಸಲಾಗುತ್ತಿದ್ದ ದುರ್ಗಾ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಸ್ಥಳದಲ್ಲಿ ಘರ್ಷಣೆ ಏರ್ಪಟ್ಟಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

ಘಟನೆ ವೇಳೆ 10 ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಕೆಲ ಅಂಗಡಿಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com