ಹಂದ್ವಾರದಲ್ಲಿ ಮತ್ತೆ ಉಗ್ರರ ದಾಳಿ: ಪೊಲೀಸ್ ವಾಹನದ ಮೇಲೆ ಗುಂಡಿನ ಮಳೆಗೆರೆದ ಉಗ್ರರು

ಶ್ರೀನಗರ ಹೊರವಲಯದ ಜಕುಲಾ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಉಗ್ರರ ಗುಂಪೊಂದು ಹಂದ್ವಾರದಲ್ಲಿ ಜಿಲ್ಲೆಯಲ್ಲಿ ದಾಳಿ ನಡೆಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹಂದ್ವಾರ: ಶ್ರೀನಗರ ಹೊರವಲಯದ ಜಕುಲಾ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಉಗ್ರರ ಗುಂಪೊಂದು ಹಂದ್ವಾರದಲ್ಲಿ ಜಿಲ್ಲೆಯಲ್ಲಿ ದಾಳಿ ನಡೆಸಿದ್ದು, ಪೊಲೀಸರ ವಾಹನವೊಂದರ ಮೇಲೆ ಗುಂಡಿನ ಮಳೆಗೆರಿದಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರ ಹಂದ್ವಾರ ಜಿಲ್ಲೆಯ ಟೂಟಿಗುಂಡ್ ಪ್ರದೇಶದಲ್ಲಿ ಕಳೆದ ರಾತ್ರಿ ಕರ್ತವ್ಯ ನಿರತ ಪೊಲೀಸರು ವಾಹನದಲ್ಲಿ ತೆರಳುತ್ತಿರಬೇಕಾದರೆ ಉಗ್ರರು ಏಕಾಏಕಿ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.

ಶುಕ್ರವಾರ ಜಕುರಾ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಶಸ್ತ್ರ ಸೀಮಾ ಬಲದ ಯೋಧರೊಬ್ಬರು ಹುತಾತ್ಮರಾಗಿ ಎಂಟು ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಮುಗಿಸಿಕೊಂಡು ಕ್ಯಾಂಪ್ ಗೆ ಹಿಂತಿರುಗುವಾಗ ಉಗ್ರರು ಯೋಧರ ಮೇಲೆ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದರು. ತಪ್ಪಿಸಿಕೊಂಡಿರುವ ಉಗ್ರರೇ ಇದೀಗ ದಾಳಿ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com