ತ್ರಿಪುರ ಕಾರಾಗೃಹದಿಂದ ತಪ್ಪಿತಸ್ಥರು ಪರಾರಿಯಾದ ಪ್ರಕರಣ: 3 ಅಧಿಕಾರಿಗಳು ಅಮಾನತು

ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ತಪ್ಪಿತಸ್ಥರು ಪರಾರಿಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಇದೀಗ ಮೂವರು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿರುವುದಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಗರ್ತಲಾ: ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ತಪ್ಪಿತಸ್ಥರು ಪರಾರಿಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಇದೀಗ ಮೂವರು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿರುವುದಾಗಿ ಸೋಮವಾರ ತಿಳಿದುಬಂದಿದೆ.

ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಸಂತೋಷ್ ಬಹದ್ದೂರ್ ಸೇರಿದ್ದಂತೆ ಮೂವರು ಜೈಲುಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.

 ಮಿಲನ್ ಡೆಬ್ಬರ್ಮ (28), ಸ್ವರ್ಣ ಕುಮಾರ್ ತ್ರಿಪುರ (22) ಮತ್ತು ರಬಿಂದ್ರ ತ್ರಿಪುರಾ (24) ಎಂಬುವವರು ತ್ರಿಪುರ ಕೇಂದ್ರ ಕಾರಾಗೃಹದಲ್ಲಿ 2012 ರಿಂದಲೂ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ್ದ ಇವರು ಕಳೆದ ಗುರುವಾರ ಮಧ್ಯರಾತ್ರಿ ಬಿಷಲಘರ್ ಜೈಲಿನಿಂದ ತಪ್ಪಿಸಿಕೊಂಡಿದ್ದರು.

ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೇಫಾಹಿಜಲ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುದೀಪ್ತ ದಾಸ್ ಅವರು, ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಭಾರಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ರಾಜ್ಯದ ಎಲ್ಲಾ 74 ಪೊಲೀಸ್ ಠಾಣೆಗಳನ್ನು ಎಚ್ಚರಿಸಲಾಗಿದೆ. ಅಲ್ಲದೆ, ತಪ್ಪಿತಸ್ಥರು ಬಾಂಗ್ಲಾ ದೇಶಕ್ಕೆ ನುಸುಳದಂತೆ ತಡೆಯಲು ಗಡಿ ಭದ್ರತಾ ಪಡೆಗೂ ಹದ್ದಿನ ಕಣ್ಣಿಟ್ಟುರುವಂತೆ ತಿಳಿಸಲಾಗಿದೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com