
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಕನ್ ಗುನ್ಯಾ ಸಾಂಕ್ರಾಮಿಕ ರೋಗ ಮತ್ತಷ್ಟು ಹೆಚ್ಚಿದ್ದು, ಸುಮಾರು 560 ಪ್ರಕರಣಗಳು ಪತ್ತೆಯಾಗಿವೆ.
ದೆಹಲಿಯ ಬಹುತೇಕ ಆಸ್ಪತ್ರೆಗಳು ಚಿಕನ್ ಗುನ್ಯಾ ದಿಂದ ಬಳಲುತ್ತಿರುವ ರೋಗಿಗಳಿಂದ ತುಂಬಿ ಹೋಗಿವೆ. ಕಳೆದ ಆಗಸ್ಟ್ 27 ರಿಂದ ಇಂದಿನವರೆಗೆ 432 ಪ್ರಕರಣಗಳು ದಾಖಲಾಗಿವೆ, ಕಳೆದ ಒಂದು ವಾರದಿಂದ ಈಚೆಗೆ ಮತ್ತೆ 128 ಚಿಕನ್ ಗುನ್ಯಾ ಸೋಂಕು ಪತ್ತೆಯಾಗಿವೆ ಎಂದು ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪೋರೇಷನ್ ಅಂಕಿ ಅಂಶ ನೀಡಿದೆ.
ಆಗಸ್ಟ್ 20ರ ವರೆಗೆ ಕೇವಲ 20 ಚಿಕನ್ ಗುನ್ಯಾ ಪ್ರಕರಣ ಪತ್ತೆಯಾಗಿತ್ತು., ಆಗಸ್ಟ್ 29 ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಒಂದರಲ್ಲೇ 250 ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿದ್ದು, ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಒಂದು ವರ್ಷದ ಮಕ್ಕಳಿಂದ 65 ವರ್ಷದ ವೃದ್ದರಿಗೂ ಸೋಂಕು ತಗುಲಿದ್ದು, ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕು ಹರಡಿದೆ ಎನ್ನಲಾಗಿದೆ.
Advertisement