ಶೈಕ್ಷಣಿಕ ಗುರಿಯನ್ನು ತಲುಪುವುದರಲ್ಲಿ ಭಾರತ 50 ವರ್ಷಗಳಷ್ಟು ಹಿಂದೆ ಬೀಳಲಿದೆ: ಯುನೆಸ್ಕೊ

ಜಾಗತಿಕ ಶೈಕ್ಷಣಿಕ ಬದ್ಧತೆಗಳ ಬಗ್ಗೆ ವರದಿಯೊಂದನ್ನು ಪ್ರಕಟಿಸಿರುವ ಯುನೆಸ್ಕೊ, ಸದ್ಯದ ಪರಿಸ್ಥಿತಿ ಮುಂದುವರೆದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸುವುದರಲ್ಲಿ ಕನಿಷ್ಠ 50 ವರ್ಷಗಳು ಹಿಂದೆಬೀಳಲಿದೆ ಎಂದು ಎಚ್ಚರಿಸಿದೆ.
ಶೈಕ್ಷಣಿಕ ಗುರಿಯನ್ನು ತಲುಪುವುದರಲ್ಲಿ ಭಾರತ 50 ವರ್ಷಗಳಷ್ಟು ಹಿಂದೆ ಬೀಳಲಿದೆ: ಯುನೆಸ್ಕೊ
ಶೈಕ್ಷಣಿಕ ಗುರಿಯನ್ನು ತಲುಪುವುದರಲ್ಲಿ ಭಾರತ 50 ವರ್ಷಗಳಷ್ಟು ಹಿಂದೆ ಬೀಳಲಿದೆ: ಯುನೆಸ್ಕೊ

ನವದೆಹಲಿ: ಜಾಗತಿಕ ಶೈಕ್ಷಣಿಕ ಬದ್ಧತೆಗಳ ಬಗ್ಗೆ ವರದಿಯೊಂದನ್ನು ಪ್ರಕಟಿಸಿರುವ ಯುನೆಸ್ಕೊ, ಸದ್ಯದ ಪರಿಸ್ಥಿತಿ ಮುಂದುವರೆದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸುವುದರಲ್ಲಿ ಕನಿಷ್ಠ 50 ವರ್ಷಗಳು ಹಿಂದೆಬೀಳಲಿದೆ ಎಂದು ಎಚ್ಚರಿಸಿದೆ.

ಈಗಿನ ಸ್ಥಿತಿಯೇ ಮುಂದುವರೆದರೆ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸಲು ಯುನೆಸ್ಕೊ ವಿಧಿಸಿರುವ ಗಡುವಿಗಿಂತ 50 ವರ್ಷ ತಡವಾಗಲಿದೆ, ಆದ್ದರಿಂದ ಶೀಘ್ರವೇ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಮಾಡಬೇಕು ಎಂದು ಯುನೆಸ್ಕೊ ವರದಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಸದ್ಯದ ಟ್ರೆಂಡ್ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಗುರಿ 2051 ರ ವೇಳೆಗೆ ಈಡೇರಲಿದೆ ಎಂದು ಅಂದಾಜಿಸಿರುವ ಯುನೆಸ್ಕೊದ ಗ್ಲೋಬಲ್ ಎಜುಕೇಷನ್ ಮಾನಿಟರಿಂಗ್( ಜಿಇಎಂ) ವರದಿಯಲ್ಲಿ ತಿಳಿಸಿದೆ. 2051 ರ ವೇಳೆಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಗುರಿ ಈಡೇರುತ್ತದೆ ಎಂದು ಅಂದಾಜಿಸಲಾಗಿದ್ದರೆ, ಸಾರ್ವತ್ರಿಕ ಕಿರಿಯ ಮಾಧ್ಯಮಿಕ ಶಿಕ್ಷಣದ ಗುರಿ 2062 ಕ್ಕೆ ಹಿರಿಯ ಮಾಧ್ಯಮಿಕ ಶಿಕ್ಷಣದ ಗುರಿ 2087 ಕ್ಕೆ ಈಡೇರುವ ಸಾಧ್ಯತೆ ಇದೆ ಎಂದು ವರದಿ ಅಂದಾಜಿಸಿದೆ.

ಭಾರತ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವದ ಗುರಿಯನ್ನು 2050 ಕ್ಕೆ ತಲುಪುವ ನಿರೀಕ್ಷೆ ಇದ್ದು, ಸಾರ್ವತ್ರಿಕ ಹಿರಿಯ ಮಾಧ್ಯಮಿಕ ಶಿಕ್ಷಣದ ಗುರಿಯನ್ನು 2087 ಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ ವಿಶ್ವಸಂಸ್ಥೆ  ಸುಸ್ಥಿರ ಅಭಿವೃದ್ಧಿ ಗುರಿಗಾಗಿ 2030 ಕ್ಕೆ ಗಡುವು ವಿಧಿಸಿದ್ದು ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸುವುದರಲ್ಲಿ ಕನಿಷ್ಠ 50 ವರ್ಷ ಹಿಂದೆಬೀಳಲಿದೆ ಎಂದು ಎಚ್ಚರಿಸಿದೆ. ಶಿಕ್ಷಣದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ತುರ್ತು ಅಗತ್ಯವಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಿದೆ ಎಂದು ಯುನೆಸ್ಕೊ ವರದಿ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com