ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಐಸಿಯುನಲ್ಲಿ ರೋಗಿ ಮೇಲೆ ರೇಪ್: ಅಪೋಲೋ ಆಸ್ಪತ್ರೆಯ ವೈದ್ಯ, ವಾರ್ಡ್ ಬಾಯ್ ಬಂಧನ

ಗುಜರಾತ್ ನ ಗಾಂಧಿನಗರ ಜಿಲ್ಲೆಯ ಪ್ರಸಿದ್ಧ ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕ(ಐಸಿಯು)ನಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ...

ಅಹಮದಾಬಾದ್: ಗುಜರಾತ್ ನ ಗಾಂಧಿನಗರ ಜಿಲ್ಲೆಯ ಪ್ರಸಿದ್ಧ ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕ(ಐಸಿಯು)ನಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಸ್ಪತ್ರೆಯ ವೈದ್ಯ ಹಾಗೂ ವಾರ್ಡ್ ಬಾಯ್ ನನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಗಾಂಧಿನಗರದ ಭಟ್ ವಿಲೇಜ್ ನಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ರಮೇಶ್ ಚೌವ್ಹಾಣ್ ಹಾಗೂ ಸ್ವೀಪರ್ ಚಂದ್ರಕಾಂತ್ ವಂಕರ್ ನನ್ನು ನಿನ್ನೆ ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎ.ಕೆ.ಪಾಂಡೆ ಅವರು ಹೇಳಿದ್ದಾರೆ.

ನಾನು ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಡಾ.ರಮೇಶ್ ಹಾಗೂ ಚಂದ್ರಕಾಂತ್ ಇಬ್ಬರು ಶನಿವಾರ ರಾತ್ರಿ ಮತ್ತು ಭಾನುವಾರ ರಾತ್ರಿ ಇಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಯುವತಿ ಆರೋಸಿದ್ದಾರೆ ಎಂದು ಪಾಂಡೆ ತಿಳಿಸಿದ್ದಾರೆ.

ಆರೋಪಿಗಳನ್ನು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಇಬ್ಬರನ್ನು ನಾಳೆಯವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com