ಟಾಲ್ಗೋ ರೈಲು (ಸಂಗ್ರಹ ಚಿತ್ರ)
ಟಾಲ್ಗೋ ರೈಲು (ಸಂಗ್ರಹ ಚಿತ್ರ)

ಕೇವಲ 12 ಗಂಟೆಯಲ್ಲಿ ದೆಹಲಿಯಿಂದ ಮುಂಬೈ ತಲುಪಿದ ಟಾಲ್ಗೋ ರೈಲು!

ಬಹು ಉದ್ದೇಶಿತ ಹೈಸ್ಪೀಡ್ ಟಾಲ್ಗೋ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದ್ದು, ಕೇವಲ 12 ಗಂಟೆಯ ಅವಧಿಯಲ್ಲಿ ರೈಲು ದೆಹಲಿಯಿಂದ ಮುಂಬೈ ತಲುಪಿದೆ.

ಮುಂಬೈ: ಕೇಂದ್ರ ಸರ್ಕಾರದ ಬಹು ಉದ್ದೇಶಿತ ಹೈಸ್ಪೀಡ್ ಟಾಲ್ಗೋ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದ್ದು, ಕೇವಲ 12 ಗಂಟೆಯ ಅವಧಿಯಲ್ಲಿ ರೈಲು ದೆಹಲಿಯಿಂದ ಮುಂಬೈ  ತಲುಪಿದೆ.

ಹಳಿ ಬದಲಾವಣೆ ಮಾಡದೇ ಹಾಲಿ ಇರುವ ಹಳಿಗಳಲ್ಲೇ ಹೈಸ್ಪೀಡ್ ರೈಲು ಓಡಿಸುವ ಭಾರತೀಯ ರೈಲ್ವೇ ಇಲಾಖೆಯ ಯೋಜನೆ ನಿರೀಕ್ಷೆಯಂತೆಯೇ ಯಶಸ್ಸುಕಂಡಿದೆ. ನಿನ್ನೆ ಮಧ್ಯಾಹ್ನ 2.45ರ  ಹೊತ್ತಿಗೆ ದೆಹಲಿಯಿಂದ ಸಂಚಾರ ಆರಂಭಿಸಿದ್ದ ಬಹು ನಿರೀಕ್ಷಿತ ಟಾಲ್ಗೋ ರೈಲು ಇಂದು ಮುಂಜಾನೆ ಸುಮಾರು 2.34ರ ಹೊತ್ತಿಗೆ ಮುಂಬೈ ರೈಲು ನಿಲ್ದಾಣ ತಲುಪಿದೆ. ಆ ಮೂಲಕ ಸುಮಾರು 1,  400 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ತಲುಪಿ ಯಶಸ್ಸು ಕಂಡಿದೆ. ಇದೇ ದೂರವನ್ನು ದೇಶದ ಹಾಲಿ ವೇಗದ ರೈಲು ಎಂದೆನಿಸಿಕೊಂಡಿರುವ ರಾಜಧಾನಿ ಎಕ್ಸ್ ಪ್ರೆಸ್ ತಲುಪಲು  ಸುಮಾರು 16 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಸ್ಪಾನಿಶ್ ಮೂಲದ ಟಾಲ್ಗೋ ರೈಲು ಒಟ್ಟು 9 ಕೋಚ್ ಗಳನ್ನು ಹೊಂದಿದ್ದು, ನಿನ್ನೆ ಪ್ರತೀ ಗಂಟೆಗೆ 150 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಈ ಟಾಲ್ಗೋ ರೈಲು ಗರಿಷ್ಟ 200 ಕಿ.ಮೀ ವೇಗದಲ್ಲಿ  ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದೆ ಇದೇ ಟಾಲ್ಗೋ ರೈಲನ್ನು ಭಾರತೀಯ ರೈಲ್ವೇ ಇಲಾಖೆ ಉತ್ತರ ಪ್ರದೇಶದ ಬರೇಲಿಯಿಂದ ಮೊರಾದಾಬಾದ್ ವರೆಗೂ ಮತ್ತು ಪಲ್ವಾಲ್  ನಿಂದ ಮಥುರಾವರೆಗೆ 2ನೇ ಬಾರಿಗೆ  ಪರೀಕ್ಷಾರ್ಥ ಸಂಚಾರ ನಡೆಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com