ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

9/11 ನ್ಯೂಯಾರ್ಕ್ ದಾಳಿ: ಸಂತ್ರಸ್ಥರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

9/11 ನ್ಯೂಯಾರ್ಕ್ ಮೇಲಿನ ಉಗ್ರರ ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿದ್ದು, ದಾಳಿ ವೇಳೆ ಮರಣವನ್ನಪ್ಪಿದ್ದ ಸಂತ್ರಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ...

ನವದೆಹಲಿ: 9/11 ನ್ಯೂಯಾರ್ಕ್ ಮೇಲಿನ ಉಗ್ರರ ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿದ್ದು, ದಾಳಿ ವೇಳೆ ಮರಣವನ್ನಪ್ಪಿದ್ದ ಸಂತ್ರಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು  1893ರಲ್ಲಿ ಇದೇ ದಿನ ಐತಿಹಾಸಿಕ ಭಾಷಣವನ್ನು ಮಾಡಿದ್ದರು. ವಿವೇಕಾನಂದ ಅವರ ಈ ಭಾಷಣ ಭಾರತ ಶಕ್ತಿಯನ್ನು ಹೆಚ್ಚಿಸಿತ್ತು. ಭಾರತದ ಶ್ರೀಮಂತ ಸಂಸ್ಕೃತಿ, ಸೋದರತ್ವ, ಬಾಂಧವ್ಯ, ಸಾರ್ವತ್ರಿಕ, ಸಾಮರಸ್ಯದ ಶಕ್ತಿಯನ್ನು ಹೆಚ್ಚಿಸಿತ್ತು.
 
ಇಂತಹ ಐತಿಹಾಸಿಕ ದಿನದಂದೇ ಮನಸ್ಸಿಗೆ ಘಾಸಿಯಾದ ಮತ್ತೊಂದು ದಿನವನ್ನೂ ನೆನೆಯುವಂತಾಗಿದೆ. ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ 9/11 ರಂದು ದಾಳಿ ನಡೆಸಲಾಗಿತ್ತು. ದಾಳಿ ವೇಳೆ 2,750ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮರಣವನ್ನಪ್ಪಿದ್ದವರಿಗೆ ಇಂದು ನಾವು ಶ್ರದ್ಧಾಂಜಲಿ ಅರ್ಪಿಸಬೇಕಾಗಿದೆ ಎಂದು ಹೇಳಿದ್ದಾರೆ.

2001 ಸೆ.11 ರಂದು ಅಲ್-ಖೈದಾ ಉಗ್ರ ಸಂಘಟನೆಯ ಗುಂಪು ನ್ಯೂಯಾರ್ಕ್ ಮೇಲೆ ದಾಳಿ ನಡೆಸಿತ್ತು. 2 ಶತಮಾನಗಳ ಅವಧಿಯಲ್ಲಿ ನಡೆದ ಮೊದಲ ವಿದೇಶಿ ದಾಳಿ ಇದಾಗಿತ್ತು. ಈ ದಾಳಿಯು ಇತರೆ ರಾಷ್ಟ್ರಗಳು ಬೆಚ್ಚಿಬೀಳುವಂತೆ ಮಾಡಿತ್ತು.

ಉಗ್ರರು ಅಪಹರಿಸಿದ್ದ ಎರಡು ಪ್ರಯಾಣಿಕ ವಿಮಾನಗಳು ವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಲೆಕ್ಕವಿಲ್ಲದಷ್ಟು ಜನರು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದರು. ಇದೀಗ ವರ್ಲ್ಡ್ ಟ್ರೇಡ್ ಸೆಂಟರ್ ಸಂಪೂರ್ಣವಾಗಿ ಪುನರ್ ನಿರ್ಮಾಣವಾಗಿದ್ದು, ಆ ಸ್ಥಳದಲ್ಲಿ ಸೆ.11 ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ, ಜಗತ್ತಿನ ಅತ್ಯಂತ ದುಬಾರಿ ರೈಲು ನಿಲ್ದಾಣ ಇನ್ನಿತರೆ ಕಲಾ ಕೇಂದ್ರ, ಕಚೇರಿಗಳು ನಿರ್ಮಾಣವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com