ವಿಮಾನದ ಬಳಿ ಫೊಟೋ ಕ್ಲಿಕ್ ಗೆ ಡಿಜಿಸಿಎ ನಿಷೇಧ!

ಪ್ರಯಾಣಿಕರ ಸುರಕ್ಷತಾ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ನಾಗರೀಕ ವಿಮಾನಯಾನ ನಿರ್ದೇಶನಾಲಯ ವಿಮಾನದ ಬಳಿ ನಿಂತು ಫೋಟೋ ತೆಗೆಯುವುದನ್ನು ನಿಷೇಧಿಸಿದೆ.
ವಿಮಾನದಲ್ಲಿ ಸೆಲ್ಫಿ ಕ್ಲಿಕ್ (ಸಂಗ್ರಹ ಚಿತ್ರ)
ವಿಮಾನದಲ್ಲಿ ಸೆಲ್ಫಿ ಕ್ಲಿಕ್ (ಸಂಗ್ರಹ ಚಿತ್ರ)

ನವದೆಹಲಿ: ಪ್ರಯಾಣಿಕರ ಸುರಕ್ಷತಾ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ನಾಗರೀಕ ವಿಮಾನಯಾನ ನಿರ್ದೇಶನಾಲಯ ವಿಮಾನದ ಬಳಿ ನಿಂತು ಫೋಟೋ ತೆಗೆಯುವುದನ್ನು ನಿಷೇಧಿಸಿದೆ.

ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲದೇ ವಿಮಾನದಿ ಸಿಬ್ಬಂದಿಗಳು ಕೂಡ ವಿಮಾನ ಪ್ರಯಾಣದ ಯಾವುದೇ ಹಂತದಲ್ಲಿ ಫೋಟೋಗ್ರಫಿ ಮಾಡದಂತೆ ಡಿಜಿಸಿಎ ಕಠಿಣ ಸೂಚನೆ ರವಾನಿಸಿದೆ.  ಇತ್ತೀಚೆಗೆ ವಿಮಾನಗಳ ಬಳಿ ನಿಂತು ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸೆಲ್ಫೆ ಕ್ಲಿಕ್ಕಿಸುತ್ತಿರುವ ಕುರಿತು ಡಿಜಿಸಿಎಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ನಾಗರೀಕ ವಿಮಾನಯಾನ  ನಿರ್ದೇಶನಾಲಯ ಈ ಮಹತ್ವದ ನಿರ್ಣಯ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ವಿಮಾನಗಳಲ್ಲಿ ಸೆಲ್ಫಿ ಕ್ಲಿಕ್ ಗಳ ಕುರಿತಂತೆ ಬಂದಿದ್ದ ಆರ್ ಟಿಐ ಅರ್ಜಿಗೆ ಉತ್ತರಿಸಿದ್ದ ಡಿಜಿಸಿಎ ವಿಮಾನ ಪ್ರಯಾಣ ವೇಳೆ ಸೆಲ್ಫಿ ಫೋಟೋ ಕ್ಲಿಕ್ಕಿಸುವುದರಿಂದ ಪೈಲಟ್ ಗಳ ಏಕಾಗ್ರತೆ  ಹಾಳಾಗುತ್ತದೆ. ಅವರ ಗಮನ ಬೇರೆಡೆ ಹೋಗಿ ಪ್ರಯಾಣಕ್ಕೆ ತೊಂದರೆಯಾಗುವ ಅಪಾಯವಿದೆ ಎಂದು ಹೇಳಿತ್ತು. ಅಲ್ಲದೆ ಇದೇ ಕಾರಣಕ್ಕೆ ಕಳೆಗ ಆಗಸ್ಟ್ 29ರಂದು ತನ್ನ ವಿಮಾನ ಸಂಸ್ಥೆಗಳ  ಸಿಬ್ಬಂದಿಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದ ಡಿಜಿಸಿಎ, ವಿಮಾನ ಪ್ರಯಾಣದ ವೇಳೆ ಸೆಲ್ಫಿ ಫೋಟೋ ಕ್ಲಿಕ್ಕಿಸುವುದರಿಂದ ಗಮನ ಬೇರೆಡೆಹೋಗುತ್ತದೆ. ಇದರಿಂದ ಪ್ರಯಾಣಕ್ಕೆ  ತೊಂದರೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರಯಾಣದ ವೇಳೆ ಫೋಟೋಗ್ರಫಿಯಲ್ಲಿ ತೊಡಗದಂತೆ ಕಿವಿ ಮಾತು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com