ಮುಂಬೈ ದಾಳಿ ವಿಚಾರಣೆ ವೇಗಗೊಳಿಸಲು ಪಾಕ್‌ಗೆ ಮಾರ್ಗ ಸೂಚಿಸಿದ ಭಾರತ

26/11ರ ಮುಂಬೈ ದಾಳಿಯ ವಿಚಾರಣೆಯನ್ನು ತೀವ್ರಗೊಳಿಸಲು ಪಾಕಿಸ್ತಾನಕ್ಕೆ ಭಾರತ ಕೆಲ ಮಾರ್ಗಗಳನ್ನು ಸೂಚಿಸಿದ್ದಾರೆ...
ಮುಂಬೈ ದಾಳಿ
ಮುಂಬೈ ದಾಳಿ

ನವದೆಹಲಿ: 26/11ರ ಮುಂಬೈ ದಾಳಿಯ ವಿಚಾರಣೆಯನ್ನು ತೀವ್ರಗೊಳಿಸಲು ಪಾಕಿಸ್ತಾನಕ್ಕೆ ಭಾರತ ಕೆಲ ಮಾರ್ಗಗಳನ್ನು ಸೂಚಿಸಿದ್ದಾರೆ.

ವಿಚಾರಣೆ ಸಂಬಂಧ ಪಾಕಿಸ್ತಾನಕ್ಕೆ ಪತ್ರ ಬರೆದಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರು, ಕಾನೂನು ಮಾರ್ಗಗಳ ಸಹಕಾರದ ಮೂಲಕ ಮುಂಬೈ ದಾಳಿ ಪ್ರಕರಣಕ್ಕೆ ನ್ಯಾಯ ಒದಗಿಸಿ ಎಂದು ಸೂಚಿಸಿದ್ದಾರೆ.

ಪಾಕಿಸ್ತಾನ ತ್ವರಿತಗತಿಯಲ್ಲಿ ಮುಂಬೈ ದಾಳಿ ಪ್ರಕರಣ ವಿಚಾರಣೆಯನ್ನು ನಡೆಸುತ್ತಿಲ್ಲ. ಮುಂಬೈ ದಾಳಿ ನಡೆದು ಎಂಟು ವರ್ಷಗಳೆ ಕಳೆದರೂ ಇನ್ನು ಪ್ರಕರಣ ಮಂದಗತಿಯಲ್ಲಿ ಸಾಗುತ್ತಿದ್ದು ಈ ಕುರಿತು ವಿದೇಶಾಂಗ ಕಾರ್ಯದರ್ಶಿ ಅವರು ಪಾಕಿಸ್ತಾನಕ್ಕೆ ಪತ್ರ ಬರೆದಿದ್ದು ಪ್ರಕರಣ ಇತ್ಯಾರ್ಥಕ್ಕೆ ಕೆಲ ಮಾರ್ಗಗಳನ್ನು ಸೂಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಬರೆದಿದ್ದ ಯಾವುದೇ ಪತ್ರಗಳಿಗೆ ಪಾಕಿಸ್ತಾನ ಸ್ಪಂಧಿಸಿರಲಿಲ್ಲ. ಸೆಪ್ಟೆಂಬರ್ 6 ರಂದು ಜೈಶಂಕರ್ ಅವರು ಮತ್ತೊಂದು ಪತ್ರ ಬರೆದಿದ್ದು, ಭಾರತದ ಹೈ ಕಮಿಷನರ್ ಸೆಪ್ಟೆಂಬರ್ 9 ರಂದು ಪಾಕಿಸ್ತಾನ ಸರ್ಕಾರಕ್ಕೆ ರವಾನಿಸಿತ್ತು ಎಂದು ವಿಕಾಸ್ ಹೇಳಿದ್ದಾರೆ.

ಕಳೆದ ತಿಂಗಳಿಂದ ಭಾರತ ಮತ್ತು ಅಮೆರಿಕ ಪಾಕಿಸ್ತಾನದ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರುತ್ತಿದ್ದರು 26/11ರ ಮುಂಬೈ ದಾಳಿಗೆ ನ್ಯಾಯ ಒದಗಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com