ವರ್ಷದ ಹಿಂದೆ ಅಪರಣಕ್ಕೀಡಾಗಿದ್ದ 2 ಭಾರತೀಯರ ರಕ್ಷಣೆ: ಸುಷ್ಮಾ ಸ್ವರಾಜ್

ವರ್ಷಗಳ ಹಿಂದಷ್ಟೇ ಲಿಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)

ನವದೆಹಲಿ: ವರ್ಷಗಳ ಹಿಂದಷ್ಟೇ ಲಿಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಲಿಬಿಯಾದಲ್ಲಿ ಕಳೆದ ವರ್ಷ ಜುಲೈ 29 ರಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಟಿ.ಗೋಪಾಲಕೃಷ್ಣ ಮತ್ತು ಸಿ. ಬಲರಾಮ್ ಕೃಷ್ಣನ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಾಪತ್ತೆಯಾಗಿದ್ದ ಟಿ.ಗೋಪಾಲಕೃಷ್ಣ ಅವರು ಆಂಧ್ರಪ್ರದೇಶ ಹಾಗೂ ಸಿ. ಬಲರಾಮ್ ಕೃಷ್ಣನ್ ಅವರು ತೆಲಂಗಾಣ ಮೂಲದವರಾಗಿದ್ದು, ಲಿಬಿಯಾದ ಸಿರ್ತೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2015ರ ಜುಲೈ ತಿಂಗಳಿನಲ್ಲಿ ಈ ಇಬ್ಬರೂ ಭಾರತೀಯರನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಉಗ್ರರು ಅಪಹರಣ ಮಾಡಿದ್ದರು ಎಂದು ಹೇಳಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com