
ಜಲಂಧರ್: ಸಿಖ್ಖರ ಪವಿತ್ರ ಗ್ರಂಥ 'ಗುರು ಗ್ರಂಥ್ ಸಾಹೀಬ್' ಹಾಗೂ 'ಭಗವದ್ಗೀತೆ'ಯ ಹಾಳೆಗಳು ಕಾಲುವೆಯೊಂದರಲ್ಲಿ ಸಿಕ್ಕ ಹಿನ್ನೆಲೆಯಲ್ಲಿ ಜಲಂಧರ್ ನ ಕಪುರ್ಥಾಲಾ ಚೌಕ್ ಪ್ರದೇಶದಲ್ಲಿ ಹಲವು ಪ್ರತಿಭಟನೆಗಳು ಸೋಮವಾರ ಆರಂಭವಾಗಿದೆ.
ಸಿಖ್ ತಲ್ಮೆಲ್ ಸಮಿತಿ ಹಾಗೂ ಕೆಲಸ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗಿಳಿದಿದ್ದು ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗದಂತೆ ಎಚ್ಚರಿಕೆ ವಹಿಸಿರುವ ಅಲ್ಲಿನ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಕೆಲ ದುಷ್ಕರ್ಮಿಗಳು 'ಗುರು ಗ್ರಂಥ್ ಸಾಹೀಬ್' ಮತ್ತು 'ಭಗವದ್ಗೀತೆ' ಪುಸ್ತಕದ 200ಕ್ಕೂ ಹೆಚ್ಚು ಹಾಳೆಗಳನ್ನು ಹರಿದಿದ್ದು, ಹಾಳೆಗಳನ್ನು ಕಪುರ್ಥಲಾ ಚೌಕ್'ನ ಶೇರ್ ಸಿಂಗ್ ಕಾಲೋನಿ ಬಳಿಯಿರುವ ಬಿಸ್ತ್-ಡೊಬ್ ಕಾಲುವೆಯೊಂದಕ್ಕೆ ಎಸೆದಿದ್ದಾರೆ. ಹಾಳೆಗಳು ಕಾಲುವೆಯಲ್ಲಿ ತೇಲುತ್ತಿದ್ದುದ್ದನ್ನು ಸ್ಥಳೀಯರು ನೋಡಿದ್ದಾರೆ. ಕೂಡಲೇ ಕಾಲುವೆಗೆ ಇಳಿದು ಹಾಳೆಗಳನ್ನು ತೆಗೆಯಲು ಆರಂಭಿಸಿದ್ದರು. ಸುದ್ದಿ ಹರಡುತ್ತಿದ್ದಂತೆ, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
Advertisement