ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿಹೆಚ್ಚಿನ ಯುವ ಸಮುದಾಯ

ದೇಶದಲ್ಲೇ ಅತಿ ಹೆಚ್ಚಿನ ಯುವ ಜನತೆ ಇರುವುದು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಉತ್ತರ ಪ್ರದೇಶ: ದೇಶದಲ್ಲೇ ಅತಿ ಹೆಚ್ಚಿನ ಯುವ ಜನತೆ ಇರುವುದು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಎಂದು ಸಮೀಕ್ಷೆಯೊಂದು ತಿಳಿಸಿದೆ.

2011ರ ಗಣತಿಯ ಪ್ರಕಾರ ಕೇರಳ ಮತ್ತು ತಮಿಳುನಾಡು ಹೆಚ್ಚಿನ ಮಧ್ಯ ವಯಸ್ಕರು ಹೊಂದಿತ್ತು, ಆದರೆ ಇತ್ತೀಚೆಗೆ ಬೆಂಗಳೂರು ಮೂಲದ ಥಿಂಕ್ ಥ್ಯಾಂಕ್ ತಕ್ಷಶಿಲಾ ಸಂಸ್ಥೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಹೆಚ್ಚಿನ ಯುಜನತೆಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಜನಸಂಖ್ಯೆಯನ್ನು ಎರಡು ಸಮಾನ ಭಾಗವಾಗಿ ವಿಭಜಿಸಿದಾಗ ಅದರಿಂದ ಯುವ ಜನತೆಯ ವಯಸ್ಸು ತಿಳಿದು, ಎಷ್ಟು ಪ್ರಮಾಣದಲ್ಲಿ ಯುವ ಜನತೆ ಇದೆ ತಿಳಿದು ಬರುತ್ತದೆ. ಕಿರಿಯ ವಯಸ್ಸು ದೇಶದಲ್ಲಿ  ಸಂಖ್ಯೆಯ ಯುವಕರಿದ್ದಾರೆ ಎಂದು ತಿಳಿಸುತ್ತದೆ.

2001 ರಲ್ಲಿ 22.51 ರಷ್ಟು ಇದ್ದದ್ದು, 2011 ರ ವೇಳೆಗೆ 24 ರಷ್ಟಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. 2050 ರ ವೇಳೆಗೆ ಮಧ್ಯಮ ವಯಸ್ಕರ ವಯಸ್ಸು 37 ವರ್ಷಕ್ಕೆ ನಿಗದಿಯಾಗಲಿದೆ.

ಚೀನಾದಲ್ಲಿ 46 ವರ್ಷದೊಳಗಿನ ಜನಸಂಖ್ಯೆಯನ್ನು ಮಧ್ಯ ವಯಸ್ಕರು ಎಂದು ಹೇಳಲಾಗುತ್ತದೆ,

ಮಧ್ಯ ವಯಸ್ಕರ  ವಯಸ್ಸನ್ನು ಗುರುತಿಸುವ ಪ್ರಮಾಣ ಭಾರತದಲ್ಲೇ ವಿಭಿನ್ನವಾಗಿದೆ. ಕೇರಳ 31 ವರ್ಷದೊಳಗಿನವರನ್ನು ಮಧ್ಯ ವಯಸ್ಕರ ಎಂದರೇ, ಅರ್ಜೆಂಟೀನಾದಲ್ಲಿ 30.8 ವಯಸ್ಸಿನವರನ್ನು ಮಧ್ಯ ವಯಸ್ಕರು ಎಂದು ಹೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ 20 ವರ್ಷಕ್ಕೆ ನಿಗದಿ ಪಡಿಸಲಾಗಿದೆ. ಅದೇ ರೀತಿ ಕೀನ್ಯಾದಲ್ಲಿ 18 ವರ್ಷ 9 ತಿಂಗಳಿಗೆ ವಯಸ್ಸನ್ನು ನಿಗದಿ ಮಾಡಲಾಗಿದೆ.

ಮಧ್ಯ ವಯಸ್ಕರ ಪ್ರಮಾಣ ಹಾಗೂ ಅಭಿವೃದ್ಧಿಯ ನಡುವೆ ಪರಸ್ಪರ ಸಂಬಂಧವಿದೆ.  ಯುವ ಜನತೆ ಪ್ರಮಾಣ ಹೆಚ್ಚಿದ್ದರೇ ಅಂಥಹ ರಾಜ್ಯದಲ್ಲಿ ತಲಾದಾಯ ಹೆಚ್ಚಿರುತ್ತೆ.

ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ, ಮತ್ತು ಗುಜರಾತ್ ಗಳಲ್ಲಿ ಹೆಚ್ಚಿನ ಯುವ ಸಮುದಾಯವಿರುವುದರಿಂದ  ಆ ರಾಜ್ಯಗಳ ತಲಾದಾಯವೂ ಕೂಡ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com