ಪಾಕ್ ಗೆ ಮತ್ತೊಂದು ಹೊಡೆತ: ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯಲಿರುವ ಭಾರತ?

ಪಾಕಿಸ್ತಾನಕ್ಕೆ ನೀರು ನೀಡುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಾಮರ್ಶಿಸಿದ ಬೆನ್ನಲ್ಲೇ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಂದು ಅಘಾತ ನೀಡಲು ಸಿದ್ಧತೆ ನಡೆಸುತ್ತಿದೆ.
ನರೇಂದ್ರ ಮೋದಿ- ನವಾಜ್ ಷರೀಫ್
ನರೇಂದ್ರ ಮೋದಿ- ನವಾಜ್ ಷರೀಫ್

ನವದೆಹಲಿ: ಪಾಕಿಸ್ತಾನಕ್ಕೆ ನೀರು ನೀಡುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಾಮರ್ಶಿಸಿದ ಬೆನ್ನಲ್ಲೇ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಂದು ಅಘಾತ ನೀಡಲು ಸಿದ್ಧತೆ ನಡೆಸುತ್ತಿದೆ.

ಈ ಬಾರಿ ಆರ್ಥಿಕ ವಿಚಾರದಲ್ಲಿ ಪಾಕಿಸ್ತಾನಕ್ಕೆ ಹೊಡೆತ ನೀಡಲು ಭಾರತ ಸಜ್ಜುಗೊಂಡಂತಿದ್ದು, ಪಾಕಿಸ್ತಾನಕ್ಕೆ ನೀಡಲಾಗಿರುವ ಅತ್ಯಂತ ನೆಚ್ಚಿನ ರಾಷ್ಟ್ರ (ಮೋಸ್ಟ್ ಫೇವರ್ಡ್ ನೇಷನ್ ) ಸ್ಥಾನವನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ.   

ಪಾಕಿಸ್ತಾನಕ್ಕೆ ಭಾರತ ನೀಡಿರುವ ಅತ್ಯಂತ ನೆಚ್ಚಿನ ರಾಷ್ಟ್ರ ಸ್ಥಾನದ ಬಗ್ಗೆ ಪರಾಮರ್ಶೆ ನಡೆಸಲು ಸೆ.29 ರಂದು ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಲಿದ್ದು, ವಾಣಿಜ್ಯ ಸಚಿವಾಲಯ, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸೆ.26 ರಂದು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಾಮರ್ಶಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನೆ ಮಾಡಿದ್ದರು. 
ಪಾಕಿಸ್ತಾನಕ್ಕೆ ನೀಡಲಾಗಿರುವ ಎಂಎಫ್ಎನ್ ಸ್ಥಾನಾದ ಬಗ್ಗೆ ಇತ್ತೀಚೆಗಷ್ಟೇ ಪ್ರಸ್ತಾಪಿಸಿದ್ದ ಅಸೊಚೆಮ್‌ ವ್ಯಾಪಾರ ವಹಿವಾಟಿನಲ್ಲಿ ಭಾರತ ಪಾಕಿಸ್ತಾನಕ್ಕೆ ಅತ್ಯಂತ ನೆಚ್ಚಿನ ರಾಷ್ಟ್ರ (ಮೋಸ್ಟ್ ಫೇವರ್ಡ್ ನೇಷನ್ ಎಂಎಫ್ಎನ್)ದ ಸ್ಥಾನ ನೀಡಿರುವುದರ ಹೊರತಾಗಿಯೂ ದ್ವಿಪಕ್ಷೀಯ ವಾಣಿಜ್ಯ ವಹಿವಾಟುಗಳಲ್ಲಿ ಗಮನಾರ್ಹ ವ್ಯತ್ಯಾಸವೇನೂ ಆಗಿಲ್ಲ. ಭಾರತ ನೀಡಿರುವ ಎಂಎಫ್ಎನ್ ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿಲ್ಲ, ಎಂಎಫ್ಎನ್ ಸ್ಥಾನದ ಹೊರತಾಗಿಯೂ ಭಾರತಕ್ಕೆ ಪಾಕಿಸ್ತಾನದ ರಫ್ತು ಅರ್ಧ ಮಿಲಿಯನ್ ಡಾಲರ್ ಗಿಂತಲೂ ಕಡಿಮೆ ಇದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com