
ಜೆರುಸಲೇಂ: ಇಸ್ರೇಲ್ ಮಾಜಿ ಅಧ್ಯಕ್ಷ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಮಾನ್ ಪೆರೆಸ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಬುಧವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದೆರಡು ವಾರಗಳ ಹಿಂದೆ ಅಂದರೆ ಕಳೆದ ಸೆಪ್ಟೆಂಬರ್ 13ರಂದು ಪಾರ್ಶ್ವವಾಯುಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 93 ವರ್ಷದ ಶಿಮಾನ್ ಪೆರೆಸ್ ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಎರಡು ಬಾರಿ ಇಸ್ರೇಲ್ ಅಧ್ಯಕ್ಷರಾಗಿದ್ದ ಪೆರೆಸ್ ಅವರು 2007ರಿಂದ 2014ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 1994ರಲ್ಲಿ ಓಸ್ಲೋ ಒಪ್ಪಂದ ಹಾಗೂ ಸ್ವತಂತ್ರ್ಯ ಪ್ಯಾಲೆಸ್ತೀನ್ ಸಂಧಾನದಲ್ಲಿ ಮಹತ್ತರ ಪಾತ್ರವಹಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಗೆ ಪೆರೆಸ್ ಭಾಜನರಾಗಿದ್ದರು.
ಪೆರೆಸ್ ರೊಂದಿಗೆ ಪ್ರಧಾನಿ ಯಿಟ್ಜಾಕ್ ರಬಿನ್ ಹಾಗೂ ಪ್ಯಾಲೆಸ್ತೀನಿ ನಾಯಕ ಯಾಸರ್ ಅರಾಫತ್ ಕೂಡ ಜಂಟಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು.
Advertisement