
ನವದೆಹಲಿ: ಇಸ್ರೇಲ್ ಮಾಜಿ ಪ್ರಧಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಮಾನ್ ಪೆರೆಸ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ.
ಭಾರತಕ್ಕೆ ಉತ್ತಮ ಸ್ನೇಹಿತರಾಗಿದ್ದ ಹಾಗೂ ವಿಶ್ವದ ಪ್ರಮುಖ ನಾಯಕರಾಗಿದ್ದ ಮಾಜಿ ಅಧ್ಯಕ್ಷ ಶಿಮೋನ್ ಪೆರೆಸ್ ಅವರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದಾಗಿ ಬಹಳ ನೋವಾಗಿದೆ. ಇಸ್ರೇಲ್ ಜನರಿಗೆ ಸಂತಾಪವನ್ನು ಸೂಚಿಸಿತ್ತೇನೆಂದು ಮೋದಿಯವರು ಹೇಳಿದ್ದಾರೆ.
ಕಳೆದೆರಡು ವಾರಗಳ ಹಿಂದಷ್ಟೇ ವಾರ್ಶ್ವವಾಯುವಿಗೆ ತುತ್ತಾಗಿದ್ದ ಶಿಮಾನ್ ಪೆರೆಸ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಶಿಮಾನ್ ಪೆರೆಸ್ ಅವರು ಸಾವನ್ನಪ್ಪಿದ್ದರು.
ಎರಡು ಬಾರಿ ಇಸ್ರೇಲ್ ಅಧ್ಯಕ್ಷರಾಗಿದ್ದ ಪೆರೆಸ್ ಅವರು 2007ರಿಂದ 2014ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 1994ರಲ್ಲಿ ಓಸ್ಲೋ ಒಪ್ಪಂದ ಹಾಗೂ ಸ್ವತಂತ್ರ್ಯ ಪ್ಯಾಲೆಸ್ತೀನ್ ಸಂಧಾನದಲ್ಲಿ ಮಹತ್ತರ ಪಾತ್ರವಹಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಗೆ ಪೆರೆಸ್ ಭಾಜನರಾಗಿದ್ದರು.
Advertisement