ಕುಡಿದ ಮತ್ತಿನಲ್ಲಿ ಹೈ ಟೆನ್ಷನ್ ವಿದ್ಯುತ್ ಕಂಬ ಏರಿದ ಭೂಪ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 11.000 ವ್ಯಾಟ್ ಹೈಟೆನ್ಷನ್ ವಿದ್ಯುಂತ್ ಕಂಬ ಏರಿ ಗಾಬರಿ ಮೂಡಿಸಿದ ಘಟನೆ ಉತ್ತರ ...
ವಿದ್ಯುತ್ ಕಂಬ ಏರಿ ಕುಳಿತ ವ್ಯಕ್ತಿ
ವಿದ್ಯುತ್ ಕಂಬ ಏರಿ ಕುಳಿತ ವ್ಯಕ್ತಿ

ಜಲೌನ್ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 11.000 ವ್ಯಾಟ್ ಹೈಟೆನ್ಷನ್ ವಿದ್ಯುಂತ್ ಕಂಬ ಏರಿ ಗಾಬರಿ ಮೂಡಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬುಕ್ಕೆ ಎಂಬಾತ ಇತ್ತೀಚೆಗೆ ಸರ್ಕಾರ ದೇಶಿ ಸಾರಾಯಿ ನಿಷೇಧ ಮಾಡಿದ್ದನ್ನು ವಿರೋಧಿಸಿ ವಿದ್ಯುತ್ ಕಂಬ ಏರಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅದೃಷ್ಟವಶಾತ್ ಬುಕ್ಕೆ ವಿದ್ಯುತ್ ಕಂಬ ಏರಿದ ವೇಳೆಯಲ್ಲಿ ಪವರ್ ಕಟ್ ಆಗಿತ್ತು.

ನಂತರ ಸ್ಥಳಕ್ಕೆ ಬಂದ ಪೊಲೀಸರು ಮತ್ತು ವಿದ್ಯುಕ್ ಇಲಾಖೆ ಸಿಬ್ಬಂದಿ ಒಂದು ಗಂಟೆಯ ನಂತರ ಕೆಳಗಿಳಿಸಿದ್ದಾರೆ. ಏಣಿಯ ಮೂಲಕ ಆತನನ್ನು ಕೆಳಗಿಳಿಸಲಾಯಿತು. ಆತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಕರೆದೊಯ್ಯಲು ನಿರ್ಧರಿಸಿದಾಗ ಆತ ಅದನ್ನು ವಿರೋಧಿಸಿದ್ದಾನೆ, ಹೀಗಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com