ಕೇಜ್ರಿವಾಲ್ ರ್ಯಾಲಿಯಲ್ಲಿ 'ಮೋದಿ' ಜಪ: ಮುಜುಗರಕ್ಕೊಳಗಾದ ದೆಹಲಿ ಸಿಎಂ
ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಹಿನ್ನಲೆಯಲ್ಲಿ ಶನಿವಾರ ನಡೆಸಲಾಗಿದ್ದ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ...
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಹಿನ್ನಲೆಯಲ್ಲಿ ಶನಿವಾರ ನಡೆಸಲಾಗಿದ್ದ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ.
ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ರ್ಯಾಲಿಯೊಂದರಲ್ಲಿ ಕೇಜ್ರಿವಾಲ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಜನರಿಗೆ ತಾವೂ ರೂಪಿಸಿರುವ ಯೋಜನೆಗಳು, ಭರವಸೆಗಳನ್ನು ನೀಡುತ್ತಿದ್ದರು. ಈ ವೇಳೆ ಜನರು ಪ್ರಧಾನಿ ಮೋದಿ ಪರವಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ.
ಮೋದಿಯವರ ಹೆಸರನ್ನು ಜಪ ಮಾಡುವುದರಿಂದ ಮನೆಗಳ ಮೇಲಿನ ತೆರೆಗೆಗಳು ಮನ್ನಾ ಆಗುತ್ತವೆ, ವಿದ್ಯುತ್ ದರಗಳು ಕಡಿಮೆಯಾಗುತ್ತವೆ, ಎಂದಾದರೆ, ನಾನೂ ಕೂಡ ಮೋದಿ ಜಪ ಮಾಡಲು ಸಿದ್ಧನಿದ್ದೇನೆಂದು ಹೇಳಿದರು.