

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ರೋನಿತ್ ರಾಯ್ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಪರಸ್ಪರ ಭೇಟಿಯಾಗಿದ್ದಾರೆ. ಈ ವೇಳೆ ಫೋಟೋ ಕ್ಲಿಕ್ಕಿಸಿಕೊಂಡ ರೋನಿತ್ ರಾಯ್ ಟ್ವಿಟ್ಟರ್‌ನಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮುನ್ನ ನಟಿಯಾಗಿದ್ದರು. ಕಿರುತೆರೆಯಲ್ಲಿ ಅವರು ನಟಿಸಿದ ಧಾರವಾಹಿಗಳು ಸೂಪರ್ ಹಿಟ್ ಆಗಿದ್ದವು. ಸ್ಮೃತಿ ಸತತ 5 ಬಾರಿ ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಬೆಸ್ಟ್ ಆವಾರ್ಡ್ ಪಡೆದಿದ್ದರು.
ಏಕ್ತಾ ಕಪೂರ್ ಅವರ Kyonki Saas Bhi Kabhi Bahu Thi ಸೀರಿಯಲ್‌ನಲ್ಲಿ ತುಳಸಿಯಾಗಿ ನಟಿಸಿದ್ದ ಸ್ಮೃತಿ ಅಪಾರ ಜನಪ್ರಿಯತೆ ಗಳಿಸಿದ್ದರು. ಈ ಸೀರಿಯಲ್‌ನಲ್ಲಿ ಸ್ಮೃತಿಗೆ ಪತಿಯಾಗಿ ರೋನಿತ್ ರಾಯ್ ಮಿಹಿರ್ ಪಾತ್ರದಲ್ಲಿ ಅಭಿನಯಿಸಿದ್ದರು. ಇಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳಿದ್ದರು.
ಟಿವಿ ಸೀರಿಯಲ್‌ನಲ್ಲಿ ಪಾಪುಲರ್ ಆಗಿದ್ದ ಈ ಜೋಡಿ ಬಹಳ ದಿನಗಳ ನಂತರ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರೋನೀತ್ ರಾಯ್ ಇರಾನಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ.