ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಗೂಡ್ಸೆ ವಂಶಸ್ಥರು: ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಪ್ರತಿಭಾವಂತರಾಗಿದ್ದು, ಅವರು ನಾಥೂರಾಮ್ ಗೋಡ್ಸೆಯವರ ವಂಶಸ್ಥರು ಎಂಬುದಾಗಿ ಆರ್ ಜೆಡಿ ಮುಖ್ಯಸ್ಥ...
ಬಿಹಾರ ರಾಜ್ಯ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್
ಬಿಹಾರ ರಾಜ್ಯ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್
Updated on
ಪಾಟ್ನ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಪ್ರತಿಭಾವಂತರಾಗಿದ್ದು, ಅವರು ನಾಥೂರಾಮ್ ಗೋಡ್ಸೆಯವರ ವಂಶಸ್ಥರು ಎಂಬುದಾಗಿ ಆರ್ ಜೆಡಿ ಮುಖ್ಯಸ್ಥಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಬಿಹಾರ ರಾಜ್ಯ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಭಾನುವಾರ ಹೇಳಿದ್ದಾರೆ. 
ಧರ್ಮನಿರಾಪೇಕ್ಷ ಸೇವಕ ಸಂಘಟನೆಯನ್ನು ಹುಟ್ಟುಹಾಕಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ತೇಜ್ ಪ್ರತಾಪ್ ಯಾದವ್ ಅವರು, ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘಟನೆಯ ವಿರುದ್ಧ ಕಿಡಿಕಾರಿದ್ದಾರೆ.
ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಇಲ್ಲಿ ನೆರೆದಿರುವ ಜನರು ಹಾಗೂ ಪತ್ರಕರ್ತರ ಸಮ್ಮುಖದಲ್ಲಿಯೇ ಸವಾಲು ಹಾಕುತ್ತಿದ್ದೇನೆ. ಹಿಂದುಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಇಲ್ಲಿರುವ ರಥಗಳ ಮೇಲೆ ಸವಾರಿ ಮಾಡುತ್ತಾರೆ. ನಿಮ್ಮ ಎದೆಯ ಮೇಲೆ ನಾವು ಸವಾರಿ ಮಾಡುತ್ತೇವೆಂದು ಹೇಳಿದ್ದಾರೆ. 
ಆರ್'ಎಸ್ಎಸ್ ಸಂಘಟನೆಗೆ ನಾಚಿಕೆಯೆಂಬುದೇ ಇಲ್ಲ. ವಯಸ್ಸಾದ ವ್ಯಕ್ತಿಗಳೂ ಕೂಡ ಚಡ್ಡಿಯನ್ನು ಧರಿಸುತ್ತಾರೆ. ಅವರ ತಲೆಗಳು ಸರಿಯಲ್ಲ. ಹೀಗಾಗಿಯೇ ಆರ್'ಎಸ್ಎಸ್ ನಾಯಕರು ಚಡ್ಡಿ ಧರಿಸುತ್ತಾರೆ. ನಮ್ಮ ದೇಶ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದನ್ನು ನಾವು ಪ್ರತೀನಿತ್ಯ ದಿನಪತ್ರಿಕೆಗಳು ಹಾಗೂ ಟಿವಿಗಳ ವರದಿಗಳಲ್ಲಿ ನೋಡುತ್ತಿರುತ್ತೇವೆ. ನಮ್ಮ ದೇಶ ಹಿಂದೂವಾದಿಗಳು ಅಥವಾ ಆರ್'ಎಸ್ಎಸ್'ಗೆ ಸೇರಿದ್ದಲ್ಲ. ಆದರೆ, ಆರ್'ಎಸ್ಎಸ್ ನಂತರ ಕೋಮುವಾದಿ ಪಡೆಗಳು ನಮ್ಮ ದೇಶವನ್ನು ಹಾಗೂ ಜನರನ್ನು ಒಡೆಯುವ ಪ್ರಯತ್ನಗಳನ್ನು ಮಾಡುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆದಿತ್ಯನಾಥ್ ಅವರು ಆರ್'ಎಸ್ಎಸ್ ನರವರಾಗಿದ್ದು, ಅವರೂ ಚಡ್ಡಿಯನ್ನು ಧರಿಸಿದ್ದರು. ಕೋಲು ಹಿಡಿದು ಲೆಫ್ಟ್-ರೈಟ್ ಪರೇಡ್ ಮಾಡುತ್ತಿದ್ದರು. ಇವರೆಲ್ಲರೂ ನಾಥೂರಾಮ್ ಗೋಡ್ಸೆಯವರ ವಶಸ್ಥರು ಎಂದು ತಿಳಿಸಿದ್ದಾರೆ. 
ಅಸುರ ಶಕ್ತಿಯನ್ನು ಹೊಂದಿರುವವರು ಇಂದು ಅಧಿಕಾರಕ್ಕೆ ಬಂದಿದ್ದಾರೆ. ಉತ್ತರಪ್ರದೇಶದ ರಾಕ್ಷಸರೊಬ್ಬರು ಅಧಿಕಾರ ನಡೆಸುತ್ತಿದ್ದಾರೆಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಇದೇ ವೇಳೆ ಬಿಜೆಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಸುಶೀಲ್ ಕುಮಾರ್ ಮೋದಿಯವರನ್ನು ನಾನು ನನ್ನ ತಂದೆ ಹಾಗೂ ಚಿಕ್ಕಪ್ಪ, ದೊಡ್ಡಪ್ಪರಂತೆ ಗೌರವಿಸುತ್ತಿದ್ದೆ. ಆದರೆ, ಆವರು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕಿಸುತ್ತಲೇ ಇದ್ದಾರೆ. ಆರ್'ಎಸ್ಎಸ್ ಅವರಿಗೆ ಇದನ್ನೇ ಹೇಳಿಕೊಟ್ಟಿದೆಯೇ? ಸುಶೀಲ್ ಅವರು ಡಿಎಸ್ಎಸ್ ಗೆ ಸೇರ್ಪಡೆಗೊಳ್ಳುವ ಅಗತ್ಯವಿದ್ದು, ಜ್ಞಾನ ಪಡೆದುಕೊಳ್ಳಬೇಕಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com