ಮಂಜಿನ ಜೊತೆ ಮಳೆಯ ಅಬ್ಬರ: ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ

ಕಣಿವೆ ರಾಜ್ಯದಲ್ಲಿ ಮಂಜಿನ ಜೊತೆಗೆ ಮಳೆ ಕೂಡ ಅಬ್ಬರಿಸುತ್ತಿದ್ದು, ಪರಿಣಾಮ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ ಎಂದು ಗುರುವಾರ ತಿಳಿದುಬಂದಿದೆ...
ಮಂಜಿನ ಜೊತೆ ಅಬ್ಬರಿಸುತ್ತಿರುವ ಮಳೆ: ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ
ಮಂಜಿನ ಜೊತೆ ಅಬ್ಬರಿಸುತ್ತಿರುವ ಮಳೆ: ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ
ಶ್ರೀನಗರ: ಕಣಿವೆ ರಾಜ್ಯದಲ್ಲಿ ಮಂಜಿನ ಜೊತೆಗೆ ಮಳೆ ಕೂಡ ಅಬ್ಬರಿಸುತ್ತಿದ್ದು, ಪರಿಣಾಮ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ ಎಂದು ಗುರುವಾರ ತಿಳಿದುಬಂದಿದೆ. 
ಕಳೆದ ಮೂರು ದಿನಗಳಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಧೀರ್ಘಾವಾಗಿ ಮಂಜು ಹಾಗೂ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ನದಿ ತೀರ ಪ್ರದೇಶಗಳಲ್ಲಿ ನೆಲೆಸಿರುವ ಜನರಿಗೆ ಅಧಿಕಾರಿಗಳು ಎಚ್ಚರಿಕೆಯನ್ನು ರವಾನಿಸಿದ್ದಾರೆಂದು ವರದಿಗಳು ತಿಳಿಸಿವೆ. 
ಇಂದೂ ಕೂಡ ಕಾಶ್ಮೀರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚುವಂತೆ ಸ್ಥಳೀಯ ಆಡಳಿತ ಮಂಡಳಿಗಳು ಸೂಚನೆ ನೀಡಿವೆ. ಅಲ್ಲದೆ, ನದಿ, ಸರೋವಲ ಮತ್ತು ಹೊಳೆಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಪ್ರವಾಹ ನಿಯಂತ್ರಣ ಇಲಾಖೆ ಹೇಳಿಕೊಂಡಿದೆ. 
ನದಿಗಳು ಸರೋವರಗಳು ಹಾಗೂ ಹೊಳೆಗಳಲ್ಲಿನ ನೀರಿನ ಮಟ್ಟವನ್ನು ಗಮನಿಸುತ್ತಿರುವಂತೆ ಈಗಾಗಲೇ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಝೇಲುಂ ನದಿ ಈಗಾಗಲೇ ಅಪಾಯ ಮಟ್ಟಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com