ಬಟಾಲಿಕ್ ಸೆಕ್ಟರ್'ನಲ್ಲಿ ಹಿಮಕುಸಿತ; ನಾಪತ್ತೆಯಾಗಿದ್ದ 3 ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಬಟಾಲಿಕ್ ಸೆಕ್ಟರ್ ನಲ್ಲಿ ತೀವ್ರ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಮೂವರು ಯೋಧರು ಹುತಾತ್ಮರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ; ಜಮ್ಮು ಮತ್ತು ಕಾಶ್ಮೀರದ ಬಟಾಲಿಕ್ ಸೆಕ್ಟರ್ ನಲ್ಲಿ ತೀವ್ರ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಮೂವರು ಯೋಧರು ಹುತಾತ್ಮರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಲಡಾಕ್ ಜಿಲ್ಲೆಯ ಬಟಾಲಿಕ್ ನಲ್ಲಿ ಗುರುವಾರ ಭಾರಿ ಹಿಮಪಾತ ಸಂಭವಿಸಿತ್ತು. ಈ ವೇಳೆ ಕರ್ತವ್ಯನಿರತ ಐವರು ಯೋಧರು ನಾಪತ್ತೆಯಾಗಿದ್ದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದ ಭಾರತೀಯ ಸೇನೆ ನಾಲ್ವರು ಯೋಧರನ್ನು ರಕ್ಷಣೆ ಮಾಡಿತ್ತು. ಇದರಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. 
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ ಹಲವು ದಿನಗಳಿಂದಲೂ ಮಂಜು ಸಹಿತ ಧಾರಾಕಾರ ಮಳೆಯಾಗುತ್ತಿದೆ. ನಿನ್ನೆ ಕೂಡ ತೀವ್ರ ಮಳೆಯಾಗಿದ್ದು, ಪರಿಣಾಮ ಬಯಲು ಪ್ರದೇಶದಲ್ಲಿ ವ್ಯಾಪಕ ಹಿಮಪಾತ ಸಂಭವಿಸಿತ್ತು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಪ್ರವಾಹ ಎಚ್ಚರಿಕೆ ಹಿನ್ನಲೆಯಲ್ಲಿ ಕಣಿವೆಯ ತಗ್ಗು ಪ್ರದೇಶಗಳಲ್ಲಿ ವಾಸವಿದ್ದ ಜನರನ್ನು ಸೇನಾ ಪಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿತ್ತು. 
ಕಳೆದ ಜನವರಿ 26 ರಂದು ಕಾಶ್ಮೀರದ ಬಂಡಿಪೋರದಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಮಂದಿ ಯೋಧರು ಹುತಾತ್ಮರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com