ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ದೇಶ
ಮಮತಾ ತಲೆಗೆ ಕಡಿದವರಿಗೆ ರೂ.11 ಲಕ್ಷ ಬಹುಮಾನ: ಬಿಜೆವೈಎಂ ನಾಯಕ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನವನ್ನು ನೀಡುತ್ತೇನೆಂದು ಭಾರತೀಯ ಜನತಾ ಯುವ ಮೋರ್ಚಾ ಸಂಘಟನೆಯ ನಾಯಕೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...
ಆಲಿಗಢ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನವನ್ನು ನೀಡುತ್ತೇನೆಂದು ಭಾರತೀಯ ಜನತಾ ಯುವ ಮೋರ್ಚಾ ಸಂಘಟನೆಯ ನಾಯಕೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ 'ಜೈ ಶ್ರೀ ರಾಮ್' ಘೋಷಣೆಯ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿಯನ್ನು ಚದುರಿಸುವ ಸಲುವಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿಯವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಬಿಜೆವೈಎಂ ನಾಯಕ ಯೋಗೇಶ್ ವರ್ಶ್ನೆ ಅವರು, ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಮತಾ ಬ್ಯಾನರ್ಜಿಯವರು ಸರಸ್ವತಿ ಪೂಜೆ ಮಾಡಲು ಎಂದಿಗೂ ಬಿಟ್ಟಿಲ್ಲ. ರಾಮ ನವಮಿ, ಹನುಮ ಜಯಂತಿ ವೇಳೆ ಜನರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಿ ಯಾವಾಗಲೂ ಮುಸ್ಲಿಮರಿಗೆ ಬೆಂಬಲ ನೀಡುತ್ತಾರೆ. ಹೀಗಾಗಿ ಮಮತಾ ಬ್ಯಾನರ್ಜಿಯವರ ತಲೆಯನ್ನು ಯಾರು ಕಡಿಯುತ್ತಾರೋ ಅವರಿಗೆ ರೂ.11 ಲಕ್ಷ ಇನಾಮು ನೀಡುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ