2 ದಿನಗಳ ಮಟ್ಟಿಗೆ ಕೂಲಿ ಮಾಡಲಿದ್ದಾರೆ ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 2 ದಿನಗಳ ಮಟ್ಟಿಗೆ ಕೂಲಿ ಕೆಲಸ ಮಾಡಲಿದ್ದಾರೆ. ಆ ಮೂಲಕ ರಾಜ್ಯದ ನಂ.1 ಕೂಲಿಯಾಗಲಿದ್ದಾರೆ...
ಕೆ. ಚಂದ್ರಶೇಖರ್ ರಾವ್
ಕೆ. ಚಂದ್ರಶೇಖರ್ ರಾವ್
Updated on
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 2 ದಿನಗಳ ಮಟ್ಟಿಗೆ ಕೂಲಿ ಕೆಲಸ ಮಾಡಲಿದ್ದಾರೆ. ಆ ಮೂಲಕ ರಾಜ್ಯದ ನಂ.1 ಕೂಲಿಯಾಗಲಿದ್ದಾರೆ.
ಕೇವಲ ತಾವು ಮಾತ್ರವಲ್ಲದೇ ತಮ್ಮ ಪಕ್ಷದ ಎಲ್ಲಾ ಶಾಸಕರು, ಸಚಿವರು, ನಾಯಕರು ಮತ್ತು ಕಾರ್ಯಕರ್ತರನ್ನು 2 ದಿನಗಳ ಕಾಲ ಕೂಲಿ ಕೆಲಸ ಮಾಡಿ ಹಣ ಸಂಪಾದಿಸುವಂತೆ ಹೇಳಿದ್ದಾರೆ. ಎರಡು ದಿನಗಳ ಕಾಲ ಕೂಲಿ ಮಾಡಿ ಸಂಪಾದಿಸುವ ಹಣವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿ ವಾರ್ಷಿಕ ಸಮಾವೇಶಕ್ಕಾಗಿ ಬಳಸಲು ನಿರ್ಧರಿಸಲಾಗಿದೆ,
ಮುಂದಿನ ಶುಕ್ರವಾರ ಅಂದರೆ ಏಪ್ರಿಲ್ 21 ರಂದು ತೆಲಂಗಾಣದ ಹೃದಯಭಾಗವಾದ ವಾರಂಗಲ್ ನಲ್ಲಿ ಎಲ್ಲರೂ ಒಟ್ಟುಗೂಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನ ಆಗಮಿಸಿ 2 ದಿನಗಳ ಕಾಲ ಕೂಲಿ ಕೆಲಸ ಮಾಡಲಿದ್ದಾರೆ. ಪಿಂಕ್ ಲೇಬರರ್ ಡೇ ಅಥವಾ ಗುಲಾಬಿ ಕೂಲಿ ದಿನಲು ಎಂದು ಕೆಸಿಆರ್ ಹೆಸರಿಟ್ಟಿದ್ದಾರೆ. ತಾವು ಯಾವ ಕೆಲಸ ಮಾಡಲಿದ್ದೇನೆ ಎಂಬುದರ ಬಗ್ಗೆ ಕೆಸಿಆರ್ ಇದುವರೆಗೂ ತಿಳಿಸಿಲ್ಲ.
ಪಕ್ಷಕ್ಕೆ ನೋಂದಣಿ ಕಾರ್ಯ ಆರಂಭಿಸಿದ್ದು, 75 ಲಕ್ಷಕ್ಕೂ ಅಧಿಕ ಮಂದಿ ಸದಸ್ಯರಾಗಿದ್ದಾರೆ, 2014 ರಲ್ಲಿ 52 ಲಕ್ಷ ಮಂದಿ ಸದಸ್ಯರಿದ್ದರು. ಸುಮಾರು 35 ಕೋಟಿ ರು ಹಣವನ್ನು ಸದಸ್ವತ್ವ ಶುಲ್ಕವಾಗಿ ಸಂಗ್ರಹಿಸಿದ್ದು,  ಅದನ್ನು ಪಕ್ಷದ ಖಾತೆಗೆ ಜಮೆ ಮಾಡಲಾಗಿದೆ ಎಂದು ಚಂದ್ರ ಶೇಖರ್ ರಾವ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com