'ವಂದೇ ಮಾತರಂ' ಹಾಡುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರುವಂತಿಲ್ಲ: ಉತ್ತರಾಖಂಡ್ ಕಾಂಗ್ರೆಸ್ ಮುಖ್ಯಸ್ಥ

'ವಂದೇ ಮಾತರಂ' ಗೀತೆಯನ್ನು ನಾನು ಹಾಡುವುದಿಲ್ಲ, ಧೈರ್ಯವಿದ್ದರೆ ನನ್ನನ್ನು ರಾಜ್ಯದಿಂದ ಹೊರ ಹಾಕಿ ಎಂದು ಬಿಜೆಪಿಗೆ ಉತ್ತರಾಖಂಡ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ್...
ಉತ್ತರಾಖಂಡ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ್
ಉತ್ತರಾಖಂಡ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ್
ಡೆಹ್ರಾಡೂನ್: 'ವಂದೇ ಮಾತರಂ' ಗೀತೆಯನ್ನು ನಾನು ಹಾಡುವುದಿಲ್ಲ, ಧೈರ್ಯವಿದ್ದರೆ ನನ್ನನ್ನು ರಾಜ್ಯದಿಂದ ಹೊರ ಹಾಕಿ ಎಂದು ಬಿಜೆಪಿಗೆ ಉತ್ತರಾಖಂಡ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ್ ಅವರು ಶುಕ್ರವಾರ ಹೇಳಿದ್ದಾರೆ. 
'ವಂದೇ ಮಾತರಂ' ಸಂಬಂಧ ಎದ್ದಿರುವ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಸರ್ಕಾರ ನಿಯಮವನ್ನು ಹೇರಿ ವಂದೇ ಮಾತರಂ ಗೀತೆ ಹಾಡುವಂತೆ ನನ್ನ ಮೇಲೆ ಒತ್ತಡ ಹೇರಿದರೂ ನಾನು ಹಾಡುವುದಿಲ್ಲ. ನಾನು ವಂದೇ ಮಾತರಂ ಹಾಡುವುದಿಲ್ಲ. ಧೈರ್ಯವಿದ್ದರೆ ನನ್ನನ್ನು ರಾಜ್ಯದಿಂದ ಹೊರಹಾಕಿ ಎಂದು ಸರ್ಕಾರಕ್ಕೆ ಈ ಮೂಲಕ ನಾನು  ಸವಾಲನ್ನು ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ. 
ವಂದೇ ಮಾತರಂ ಗೀತೆ ಹಾಡದವರನ್ನು ರಾಜ್ಯದಿಂದ ಹೊರಹಾಕುತ್ತೇವೆಂಬ ಹೇಳಿಕೆ ದೇಶಭಕ್ತಿ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತದೆ. ಹಿಂದಿನಿದಂಲೂ ಕಾಂಗ್ರೆಸ್ ರಾಷ್ಟ್ರೀಯ ಗೀತೆಯನ್ನು ಹಾಡುತ್ತಲೇ ಬಂದಿದೆ. ಬಿಜೆಪಿ ರಚನೆಗೊಳ್ಳುವುದಕ್ಕಿಂತಲೂ ಹಿಂದಿನಿಂದಲೂ ಕಾಂಗ್ರೆಸ್ ರಾಷ್ಟ್ರಗೀತೆಯನ್ನು ಹಾಡುತ್ತಿದೆ. ಒಬ್ಬರ ದೇಶಭಕ್ತಿಯನ್ನು ಯಾವುದೋ ಆಧಾರದ ಮೇಲೆ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. 
ವಂದೇ ಮಾತರಂ ಸಂಬಂಧ ಬಿಜೆಪಿ ನಾಯಕರು ಹೇಳಇಕೆ ನೀಡಿರುವುದು ನಿಜಕ್ಕೂ ನನಗೆ ನೋವನ್ನುಂಟು ಮಾಡಿದೆ. ಹಿಂದೂ ಸಂಪ್ರದಾಯದ ಕುರಿತಂತೆ ನನ್ನಲ್ಲಿರುವ ನಂಬಿಕೆ ಇತರೆ ಪಕ್ಷದ ಯಾವುದೇ ನಾಯಕರಲ್ಲೂ ಇಲ್ಲ. ನಾನು ಭಾಗಿಯಾಗಿರದ ಧರ್ಮಾಚರಣೆಯೇ ಇಲ್ಲ. ಆದರೆ, ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ರಾಜ್ಯದಲ್ಲಿರಬೇಕೆಂದರೆ, ಜನತೆ ವಂದೇ ಮಾತರಂ ಗೀತೆಯನ್ನು ಹಾಡಲೇಬೇಕೆಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com