ರೈಲು ಅಪಘಾತದಲ್ಲಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ. ಯಾವುದೇ ಸಾವುಗಳು ಸಂಭವಿಸಿಲ್ಲ. ಪ್ರಕರಣವನ್ನು ತನಿಖೆಗೆ ಆದೇಶಲಾಗಿದ್ದು, ತಪ್ಪಿತಸ್ಧರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಗಾಯಾಳುಗಳಿಗೆ ರೂ. 50 ಸಾವಿರ ಪರಿಹಾರವನ್ನು ನೀಡಲಾಗುವುದು ಎಂದು ಸುರೇಶ್ ಪ್ರಭು ಅವರು ತಿಳಿಸಿದ್ದಾರೆ.
ಉತ್ತರ ರೈಲ್ವೆ ವಕ್ತಾರ ಉತ್ತರ ರೈಲ್ವೆ ವಕ್ತಾರ ನೀರಜ್ ಶರ್ಮಾ ಮಾತನಾಡಿ, 8 ಬೋಗಿಗಳ ಪೈಕಿ 2 ಬೋಗಿಗಳು ನಾಶವಾಗಿದೆ. ಪ್ರಯಾಣಿಕರ ಸಂಬಂಧಿಕರಿಗಾಗಿ ಈಗಾಗಲೇ ಸಹಾಯವಾಣಿಗಳನ್ನು ತೆರೆಯಲಾಗಿದೆ. ರೈಲು ಹಳಿ ತಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಮೊರಾದಾಬಾದ್ ಡಿಆರ್'ಎಂ ಪ್ರಮೋದ್ ಕುಮಾರ್ ಸೇರಿದಂತೆ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ವೈದ್ಯಕೀಯ ತಂಡ ಕೂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದಾರೆ.
ಘಟನೆಯನ್ನು ಸೇರಿದಂತೆ ಉತ್ತರಪ್ರದೇಶ ರಾಜ್ಯದಲ್ಲಿ 1 ತಿಂಗಳಲ್ಲಿ ಎರಡು ರೈಲುಗಳು ಹಳಿತಪ್ಪಿದಂತಾಗಿದೆ. ಮಾರ್ಚ್ 31 ರಂದು ಮಹಾರೋಶ್ಲಾ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿ 25 ಜನರು ಸಾವನ್ನಪ್ಪಿದ್ದರು.