ಶ್ರೀನಗರ ಲೋಕಸಭೆ ಉಪಚುನಾವಣೆ: 9 ಸಾವಿರ ಮತಗಳ ಅಂತರದಿಂದ ಜಯಗಳಿಸಿದ ಫಾರೂಖ್ ಅಬ್ದುಲ್ಲಾ

ವ್ಯಾಪಕ ಹಿಂಸಾಚಾರ ಮತ್ತು ಗೋಲಿಬಾರ್‍ನಿಂದ ಎಂಟು ಜನ ಬಲಿಯಾದ ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫೆರನ್ಸ್ ನಾಯಕ ...
ಪಾರೂಖ್ ಅಬ್ದುಲ್ಲಾ
ಪಾರೂಖ್ ಅಬ್ದುಲ್ಲಾ
Updated on: 
ನವದೆಹಲಿ: ವ್ಯಾಪಕ ಹಿಂಸಾಚಾರ ಮತ್ತು ಗೋಲಿಬಾರ್‍ನಿಂದ ಎಂಟು ಜನ ಬಲಿಯಾದ ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫೆರನ್ಸ್ ನಾಯಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಫಾರೂಕ್ ಅಬ್ದುಲ್ಲಾ ಗೆಲುವು ಸಾಧಿಸಿದ್ದಾರೆ. 
ಆಡಳಿತರೂಢ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಅಭ್ಯರ್ಥಿ ನಾಸಿರ್ ಅಹಮದ್ ಖಾನ್ ಗಿಂತ 9 ಸಾವಿರಕ್ಕೂ ಹೆಚ್ಚು ಮತಗಳಿಸಿ ವಿಜಯಮಾಲೆ ಧರಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಪಿಡಿಪಿ ಯಿಂದ ಕಾರೀಖ್ ಖರ್ರಾ ಸ್ಪರ್ಧಿಸಿ ಜಯಗಳಿಸಿದರು. ಆದರೆ ನಂತರ ಅವರು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದರು. ಲೋಕಸಭೆ ಉಪ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿತ್ತು.
ಮೊದಲಿಗೆ ಏಪ್ರಿಲ್ 9 ರಂದು ಮತದಾನ ನಿಗದಿ ಪಡಿಸಲಾಗಿತ್ತು. ಆದರೆ ಹಿಂಸಾಚಾರದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು. ಮತ್ತೆ ಗುರುವಾರ ನಡೆದ ಮರು ಮತದಾನದಲ್ಲಿ ಶೇ.2ರಷ್ಟು ಮತದಾರರು ಮಾತ್ರ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. ಇಂದು ನಡೆದ ಎಣಿಕೆಯಲ್ಲಿ ಆರಂಭದಿಂದಲೂ ತಮ್ಮ ಪ್ರತಿಸ್ಪರ್ಧಿ ಮುನ್ನಡೆ ಸಾಧಿಸಿದ ಮಾಜಿ ಮುಖ್ಯಮಂತ್ರಿ ಅಬುಲ್ಲಾ ಗೆಲುವು ಸಾಧಿಸಿದರು. ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದರೂ ಅಬುಲ್ಲಾ ಮತ್ತು ಖಾನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com