ಜಮ್ಮು-ಕಾಶ್ಮೀರ: ವಕೀಲ, ಮಾಜಿ ಉಗ್ರನ ಹತ್ಯೆ

ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಮಾಡಿ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಮಾಜಿ ಉಗ್ರನೊಬ್ಬನನ್ನು ಭಾನುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಮಾಡಿ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಮಾಜಿ ಉಗ್ರನೊಬ್ಬನನ್ನು ಭಾನುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ. 
ಮೊದಲು ಶೋಪಿಯಾನ್ ಜಿಲ್ಲೆಯ ಪಿಂಚೋರಾ ಗ್ರಾಮದಲ್ಲಿ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಇಮ್ತಿಯಾಜ್ ಅಹಮದ್ ಖಾನ್ ರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸ್ಥಳೀಯ ಮಸೀದಿಯೊಂದರಿಂದ ವಕೀಲ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಖಾನ್ ಅವರು ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್'ನ ಕಾರ್ಯಕರ್ತರಾಗಿದ್ದರು. ಖಾನ್ ಅವರ ಮೇಲೆ ಗುಂಡು ಹಾರಿಸಿದ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ವಕೀಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಖಾನ್ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. 
ಇದೇ ವೇಳೆ ಬಂಡೀಪೋರಾ ಜಿಲ್ಲೆಯಲ್ಲಿ ನಡೆಯ ಇನ್ನೊಂದು ಘಟನೆಯಲ್ಲಿ ನಡೆದಿದೆ. ಮಾಜಿ ಉಗ್ರ ಅಬ್ದುಲ್ ರಶೀದ್ ಪರ್ರೆ ಅಲಿಯಾಸ್ ರಶೀದ್ ಬಿಲ್ಲಾ ಎಂಬಾತನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಎರಡೂ ಘಟನೆಗಳೂ ಸೇರಿದಂತೆ ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಘಟನೆ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರ್ರೆ ಅವರ ದೇಹದೊಳಗೆ ನಾಲ್ಕು ಗುಂಡುಗಳು ಹೊಕ್ಕಿದ್ದು, ಗುಂಡು ಹಾರಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. ಇಖ್ವಾನ್ ಎಂಬ ಉಗ್ರ ಸಂಘಟನೆಯೊಂದಲ್ಲಿ ಪರ್ರೆ ಕಮಾಂಡರ್ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com