ಮೋದಿ ಸ್ವಾಗತಕ್ಕೆ ಸಾವಿರಾರು ಬೈಕ್ ಗಳು, 75 ಸಾವಿರ ಯುವಕ, ಯುವತಿಯರ ದಂಡು!

ಎರಡು ದಿನಗಳ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಭಾನುವಾರ ರಾತ್ರಿ ಸೂರತ್ ಗೆ ಆಗಮಿಸಿದ್ದು, ಈ ವೇಳೆ ಭರ್ಜರಿ ರೋಡ್ ಶೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು.
ಭಾರಿ ರೋಡ್ ಶೋ
ಭಾರಿ ರೋಡ್ ಶೋ
Updated on: 

ಸೂರತ್: ಎರಡು ದಿನಗಳ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಭಾನುವಾರ ರಾತ್ರಿ ಸೂರತ್ ಗೆ ಆಗಮಿಸಿದ್ದು, ಈ ವೇಳೆ ಭರ್ಜರಿ ರೋಡ್ ಶೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು.

2014ರಲ್ಲಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಸೂರತ್ ಗೆ ಭೇಟಿ ನೀಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಈ ಭಾರಿ ರೋಡ್ ಶೋ ನಲ್ಲಿ ಸುಮಾರು 75 ಸಾವಿರಕ್ಕೂ  ಅಧಿಕ ಯುವಕ ಯುವತಿಯರು ಪಾಲ್ಗೊಂಡಿದ್ದರು.  ತ್ರಿವರ್ಣ ಧ್ವಜ ಹಿಡಿದು ‘ಭಾರತ್‌ ಮಾತಾ ಕೀ ಜೈ' ಘೋಷಣೆ ಕೂಗುತ್ತಾ ನಿಂತಿದ್ದ ಜನರು, ರೋಡ್‌ ಶೋ ಉದ್ದಕ್ಕೂ ಮೋದಿಯವರನ್ನು ಅಭಿನಂದಿಸಿದರು. ಮೋದಿ ತಮ್ಮ  ಮೇಲ್ಛಾವಣಿ ತೆರೆದ ಕಾರಿನಲ್ಲಿ ಜನರತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದರು. ಪ್ರತಿ 200 ಮೀಟರ್‌ ಗೊಂದು ಸ್ವಾಗತ ಕೇಂದ್ರ ರಚಿಸಲಾಗಿತ್ತು.

ಇದರಲ್ಲಿ ಯುವಕರು, ಮಹಿಳೆಯರು ಮತ್ತು ವಿವಿಧ ಸಮುದಾಯ ಸಂಘಟನೆಗಳ ಪ್ರಮುಖರು ಪ್ರಧಾನಿಯವರನ್ನು ಸ್ವಾಗತಿಸಿದರು. 11 ಕಿ.ಮೀ. ರಸ್ತೆಯುದ್ದಕ್ಕೂ ಸರ್ಕಾರದ ವಿವಿಧ ಯೋಜನೆಗಳ ಹೆಸರುಗಳನ್ನು ಮುದ್ರಿಸಲಾಗಿದ್ದ  ಸೀರೆಯನ್ನು ಕಟ್ಟಲಾಗಿತ್ತು. ವಿಮಾನ ನಿಲ್ದಾಣದ ಬಳಿ 22 ಅಡಿ ಎತ್ತರದ ಕಟೌಟ್‌ ನಿಲ್ಲಿಸಲಾಗಿದ್ದು, ಇಲ್ಲಿ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.  ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ  ಗುಜರಾತ್‌ ನಲ್ಲಿ ಭಾನುವಾರ ನಡೆದ ಮೋದಿಯವರ ಈ ಬೃಹತ್‌ ರೋಡ್‌ ಶೋ, ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com