ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸಂಜೀವ್ ಬಲ್ಯಾನ್ ಅವರು, ತ್ರಿವಳಿ ತಲಾಖ್ ವಿರುದ್ಧ ಪ್ರತೀಯೊಬ್ಬರೂ ನಿಲ್ಲಬೇಕು. ಮಹಿಳೆಯರಿಗೆ ನೀಡಬೇಕಿರುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಬೇಕು. ಮಹಿಳೆಯರ ಸಬಲೀಕರಣದ ಬಗ್ಗೆ ನಾವು ಮಾತುನಾಡುವುದಾದರೆ, ತ್ರಿವಳಿ ತಲಾಖ್ ವ್ಯವಸ್ಥೆಯನ್ನೇಕೆ ತೊಡೆದು ಹಾಕಬಾರದು?...ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಹಾಗೂ ಅವರು ತೆಗೆದುಕೊಳ್ಳುವ ಕ್ರಮಗಳನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆಂದು ಹೇಳಿದ್ದಾರೆ.