ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ: ಸೇನೆ ಬೆಂಬಲಕ್ಕೆ ನಿಂತ ಅಟಾರ್ನಿ ಜನರಲ್ ರೊಹ್ಟಗಿ

ಕಲ್ಲುತೂರಾಟಗಾರರನ್ನು ಜೀಪ್'ಗೆ ಕಟ್ಟಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಗೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿಯವರು ಸೋಮವಾರ ಬೆಂಬಲ ವ್ಯಕ್ತಪಡಿಸಿದ್ದಾರೆ...
ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ
ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ
ನವದೆಹಲಿ: ಕಲ್ಲುತೂರಾಟಗಾರರನ್ನು ಜೀಪ್'ಗೆ ಕಟ್ಟಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಗೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿಯವರು ಸೋಮವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವವರನ್ನು ನಿಗ್ರಹಿಸುವ ಭಾಗವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೇನಾ ಸಿಬ್ಬಂದಿಗಳು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ, ಸಾಕಷ್ಟು ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು. 
ಈ ಹಿನ್ನಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿಯವರು, ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಸೇನೆ ಜೀಪ್ ಕಟ್ಟಿದ ವರದಿಗಳನ್ನು ನೋಡಿದೆ. ಇದರ ವಿಡಿಯೋ ಏಕೆ ಇಷ್ಟೊಂದು ಸದ್ದು ಮಾಡುತ್ತಿದೆ. ಸೇನೆಯ ಈ ಕೆಲಸ ಕಲ್ಲುತೂರಾಟವನ್ನು ನಿಯಂತ್ರಿಸಿತ್ತಿ. ಅಲ್ಲದೆ, ಚುನಾವಣಾಧಿಕಾರಿಗಳನ್ನು ರಕ್ಷಣೆ ಮಾಡಿತ್ತು ಎಂದು ಹೇಳಿದ್ದಾರೆ. 
ಪ್ರತೀನಿತ್ಯ ಒಬ್ಬೊಬ್ಬರು ಸಾಯುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಹಾಳಾಗುತ್ತಿದೆ. ಸೇನಾ ಪಡೆ ಉಗ್ರರೊಂದಿಗೆ ಕಾದಾಡುತ್ತದೆಯೇ ವಿನಃ ಕಲ್ಲುತೂರಾಟ ನಡೆಸುವವರ ಜೊತೆಗಲ್ಲ. ಪರಿಸ್ಥಿತಿಗಳು ಎದುರಾದಾಗ ಇದೇ ರೀತಿಯಲ್ಲಿಯೇ ನಡೆದುಕೊಳ್ಳಬೇಕಾದುತ್ತದೆ. ಸೇನೆ ಉತ್ತಮವಾಗಿ ತನ್ನ ಕೆಲಸವನ್ನು ಮಾಡುತ್ತಿದ್ದು, ಭಾರತೀಯ ಸೇನೆ ಕುರಿತಂತೆ ಪ್ರತೀಯೊಬ್ಬರು ಹೆಮ್ಮೆ ಪಡಬೇಕಿದೆ. ಎಸಿ ರೂಮಿನಲ್ಲಿ ಕುಳಿತುಕೊಂಡು ಸೇನೆ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸೇನೆಯ ಸ್ಥಾನದಲ್ಲಿ ನಿಂತುಕೊಂಟು ಯೋಚನೆ ಮಾಡಬೇಕಿದೆ.
ಸ್ಥಳದಲ್ಲಿರುವ ಪರಿಸ್ಥಿತಿಗೆ ತಕ್ಕಂತೆ ಸೇನೆ ನಿರ್ಧಾರ ಕೈಗೊಂಡಿದೆ. ಯಾರಿಗೂ ನೋವು ಮಾಡದಂತೆ ಸೇನೆ ತನ್ನ ಕಾರ್ಯವನ್ನು ಮಾಡಿದ್ದರೆ. ಇದು ನಿಜಕ್ಕೂ ಉತ್ತಮವಾದ ಕೆಲಸ. ಪರಿಸ್ಥಿತಿಯನ್ನು ಅವಲೋಕಿಸಿಸಿದರೆ ಇದರಲ್ಲಿ ಯಾವುದೇ ತಪ್ಪಿಲ್ಲ. ಮತ್ತೆ ಈ ರೀತಿಯ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾದರೆ, ಸೇನೆ ಕೈಗೊಳ್ಳಲಿ ಸೇನೆ ಹಾಗೂ ಮೇಜರ್ ನಾವು ಶೇ.100ರಷ್ಟು ಬೆಂಬಲವನ್ನು ವ್ಯಕ್ತಪಡಿಸುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com