ದಾದ್ರಿ ಪ್ರಕರಣ: ಓರ್ವ ಆರೋಪಿಗೆ ಜಾಮೀನು ಮಂಜೂರು, ಬಿಡುಗಡೆ

ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಉತ್ತರಪ್ರದೇಶ ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ನಿಂದ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಗೊಂಡಿದ್ದಾನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗ್ರೇಟರ್ ನೊಯ್ಡಾ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಉತ್ತರಪ್ರದೇಶ ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ನಿಂದ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. 
ಪುನೀತ್ ಎಂಬ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ನಿನ್ನೆ ಸಂಜೆ ಜೈಲಿನಿಂದ ಬಿಡುಗಡೆಗೊಂಡಿದ್ದಾನೆಂದು ತಿಳಿದುಬಂದಿದೆ. 
ದಾದ್ರಿ ಪ್ರಕರಣ ಸಂಬಂಧ ಬಂಧಿತನಾಗಿದ್ದ ಪುನಿತ್ ಗ್ರೇಟರ್ ನೊಯ್ಡಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ. ಏಪ್ರಿಲ್ 6 ರಂದು ಹೈಕೋರ್ಟ್ ಪೂನೀತ್ ಹಾಗೂ ಅರುಣ್'ಗೆ ಜಾಮೀನು ಮಂಜೂರು ಮಾಡಿತ್ತು. ಇದರಂತೆ ನಿನ್ನೆ ಪುನೀತ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. 
ಮತ್ತೊಬ್ಬ ಆರೋಪಿ ಅರ್ಜುನ್ ಕುರಿತಂತೆ ದಾಖಲೆಗಳು ಅಧಿಕಾರಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ ತಲುಪಸಿದ್ದು, ಎರಡು ದಿನಗಳಲ್ಲಿ ಆತ ಕೂಡ ಬಿಡುಗಡೆಗೊಳ್ಳಲಿದ್ದಾನೆ. ದಾಖಲೆ ಅಧಿಕಾರಿಗಳಿಗೆ ತಲುವವರೆಗೂ ಅರ್ಜುನ್ ಜೈಲಿನಲ್ಲಿಯೇ ಇರಬೇಕಾಗಿದೆ ಎಂದು ವರದಿಗಳು ತಿಳಿಸಿವೆ. 
ಉತ್ತರಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಣೆಯಲ್ಲಿ ತೊಡಗಿದ್ದಾನೆಂದು ಅನುಮಾನಿಸಿ 10 ಜನರ ಗುಂಪೊಂದು 2015ರ ಸೆಪ್ಟೆಂಬರ್ 28ರಂದು 50 ವರ್ಷದ ಮೊಹಮ್ಮದ್ ಇಖ್ಲಾಕ್ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಇಖ್ಲಾಕ್ ನನ್ನು ಹತ್ಯೆ ಮಾಡಿತ್ತು. ಈ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com