ಚೀನಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆ, ಪಾಕಿಸ್ತಾನದ ಮೌನವನ್ನು ಪ್ರಶ್ನಿಸಿದ ಕಾಶ್ಮೀರ ಪತ್ರಿಕೆ

ಕಾಶ್ಮೀರ ಇಮೇಜ್ ಎಂಬ ಪತ್ರಿಕೆಯೊಂದು ವಿಶ್ಲೇಷಣಾತ್ಮಕ ಲೇಖನ ಪ್ರಕಟಿಸಿದ್ದು, ಚೀನಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆ ಬಗ್ಗೆ ಪಾಕಿಸ್ತಾನದ ಮೌನವನ್ನು ಪ್ರಶ್ನಿಸಿದೆ.
ಚೀನಾ ಸೇನೆ (ಸಂಗ್ರಹ ಚಿತ್ರ)
ಚೀನಾ ಸೇನೆ (ಸಂಗ್ರಹ ಚಿತ್ರ)
ಶ್ರೀನಗರ: ಚೀನಾ ಭಾರತದ ವಿಷಯದಲ್ಲಿ ಮಾತ್ರ ಪಾಕ್ ಭಯೋತ್ಪಾದನೆ, ಭಯೋತ್ಪಾದಕರ ಪರ ವಹಿಸಿ ನಿಲುವು ತಳೆಯುತ್ತದೆ. ಆದರೆ ತನ್ನದೇ ನೆಲದಲ್ಲಿನ ತೀವ್ರವಾದಿಗಳನ್ನು ಮಟ್ಟ ಹಾಕಲು ಚೀನಾ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಕ್ಸಿನ್ಜಿಯಾಂಗ್ ನಲ್ಲಿ ಹೆಚ್ಚುತ್ತಿರುವ ಪ್ರತ್ಯೇಕತಾವಾದದ ಕೂಗನ್ನು ಬಾಹ್ಯ ಪ್ರಪಂಚಕ್ಕೆ ಕೇಳದಂತೆ ಮಾಡಲು ಅಲ್ಪಸಂಖ್ಯಾತ ಸಮುದಾಯದವರನ್ನು ಬೇರೆಡೆಗೆ ಸ್ಥಳಾಂತರ ಹಾಗೂ ಹತ್ಯೆ ಮಾಡಲಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. 
ಚೀನಾದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಾಶ್ಮೀರ ಇಮೇಜ್ ಎಂಬ ಪತ್ರಿಕೆಯೊಂದು ವಿಶ್ಲೇಷಣಾತ್ಮಕ ಲೇಖನ ಪ್ರಕಟಿಸಿದ್ದು, ಚೀನಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆ ಬಗ್ಗೆ ಪಾಕಿಸ್ತಾನದ ಮೌನವನ್ನು ಪ್ರಶ್ನಿಸಿದೆ. ಚೀನಾದಲ್ಲಿ ಮುಸ್ಲಿಂ ಸಮುದಾಯದವರನ್ನು ಹತ್ಯೆ ಮಾಡಲಾಗುತ್ತಿದೆ. ಆದರೆ ಇಸ್ಲಾಂ ನ ಪ್ರವರ್ತಕ ರಾಷ್ಟ್ರವಾಗಿರುವ ಪಾಕಿಸ್ತಾನ ಮಾತ್ರ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಕಾಶ್ಮೀರಿ ಇಮೇಜ್ ಆಕ್ಷೇಪ ವ್ಯಕ್ತಪಡಿಸಿದೆ. 
ಹಫೀಜ್ ಸಯೀದ್ ನಂತಹ ಜಿಹಾದಿಗಳು ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಹೇಳುತ್ತಿದ್ದರೂ, ಚೀನಾದಲ್ಲಿ ನಡೆಯುತ್ತಿರುವ ಈ ಕೃತ್ಯಗಳು ಹಫೀಜ್ ಸಯೀದ್ ನಂತಹವರ ಬದ್ಧತೆಯನ್ನು ತಲೆಕೆಳಗೆ ಮಾಡಿವೆ. ಪಾಕಿಸ್ತಾನಕ್ಕೆ ಚೀನಾ ಕಾರ್ಪೊರೇಟ್ ಮಿತ್ರ ರಾಷ್ಟ್ರವಾಗಿದ್ದು, ಪಾಕಿಸ್ತಾನ ತನ್ನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂಬುದು ಚೀನಾಗೆ ಚೆನ್ನಾಗಿ ಮನವರಿಕೆಯಾಗಿದೆ ಎಂದು ಕಾಶ್ಮೀರ್ ಇಮೇಜಸ್ ಪತ್ರಿಕೆ ವಿಶ್ಲೇಷಿಸಿದೆ. 
ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಹೆಸರಿನಲ್ಲಿ ಚೀನಾದಲ್ಲಿರುವ ಮುಸ್ಲಿಂ ಸಮುದಾಯವನ್ನು ಧಮನಿಸುತ್ತಿದೆ. ಚೀನಾದಲ್ಲಿರುವ ಮುಸ್ಲಿಮರು ಹಲವು ದಶಕಗಳಿಂದ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಆದರೆ ಸ್ವಘೋಷಿತ ಇಸ್ಲಾಮ್ ಧರ್ಮದ ಪ್ರವರ್ತಕ, ದಾರಿ ದೀಪ ರಾಷ್ಟ್ರವಾಗಿರುವ ಪಾಕಿಸ್ತಾನ ಮಾತ್ರ ಚೀನಾದ ಕೃತ್ಯಗಳನ್ನು ಖಂಡಿಸದೇ ಚೀನಾದ ಕ್ರೈಮ್ ಗಳನ್ನು ತಾನೂ ಅಪ್ಪಿಕೊಂಡಿದೆ ಎಂದು ಕಾಶ್ಮೀರದ ಪತ್ರಿಕೆ ಟೀಕಾಪ್ರಹಾರ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com