ಕಾಶ್ಮೀರಿಗರ ಸುರಕ್ಷತೆ ಕುರಿತು ರಾಜನಾಥ್ ಸಿಂಗ್ ಆದೇಶ: ಕಾಂಗ್ರೆಸ್ ಬೆಂಬಲ

ಕಾಶ್ಮೀರಿಗರ ಸುರಕ್ಷತೆ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೀಡಿದ್ದ ಆದೇಶಕ್ಕೆ ಕಾಂಗ್ರೆಸ್ ಶನಿವಾರ ಬೆಂಬಲ ವ್ಯಕ್ತಪಡಿಸಿದೆ...
ಗೃಹ ಸಚಿವ ರಾಜನಾಥ್ ಸಿಂಗ್
ಗೃಹ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಕಾಶ್ಮೀರಿಗರ ಸುರಕ್ಷತೆ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೀಡಿದ್ದ ಆದೇಶಕ್ಕೆ ಕಾಂಗ್ರೆಸ್ ಶನಿವಾರ ಬೆಂಬಲ ವ್ಯಕ್ತಪಡಿಸಿದೆ. 
ರಾಜನಾಥ್ ಸಿಂಗ್ ಅವರ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಗೃಹ ಸಚಿವರು ಈ ರೀತಿಯಾಗಿ ಮಾತನಾಡಿರುವುದನ್ನು ನೋಡಿದರೆ ಆಶ್ಚರ್ಯವಾಯಿತು. ಭಾರತದ ನಾಗರೀಕರನಾಗಿ ಈ ರೀತಿಯ ಹೇಳಿಕೆಯ ನೀಡುವುದು ಸಹಜವೇ. ಜಮ್ಮು ಮತ್ತು ಕಾಶ್ಮೀರ ಭಾರತ ಅವಿಭಾಜ್ಯ ಅಂಗ. ಕಾಶ್ಮೀರದ ನಿವಾಸಿಗಳು ಭಾರತದ ನಾಗರೀಕರ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿರುವ ನಿವಾಸಿಗಳು ಶಿಕ್ಷಣ ಹಾಗೂ ಉದ್ಯೋಗ ಅರಸಿ ಇತರೆ ರಾಜ್ಯಗಳಿಗೆ ಬಂದಾಗ ಅವರನ್ನು ಅನ್ಯಗ್ರಹದಿಂದ ಬಂದ ಜನದಂತೆ ನೋಡಬಾರದು. ಜನರಿಗೆ ಅಹಿತಕರವೆಂಬ ಭಾವನೆ ಹುಟ್ಟಿಸುವುದು ದೇಶ ಎಂದಿಗೂ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. 
ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾದ ಬೆನ್ನಲ್ಲೇ  ಸೂಚನೆ ನೀಡಿದ್ದ ರಾಜನಾಥ ಸಿಂಗ್ ಅವರು, ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಕರೆ ನೀಡಿದ್ದರು. 
ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಯೋತ್ಪಾದಕರು, ಕಲ್ಲು ತೂರಾಟ ನಡೆಸುವವರು ಎಂದು ಆರೋಪಿಸಿದ್ದ ಸ್ಥಳೀಯರು ಹಲ್ಲೆ ನಡೆಸಿದ್ದರು. 
ಈ ಘಟನೆ ಬಳಿಕ ಕಾಶ್ಮೀರದಲ್ಲಿ ಸೇನಾ ಪಡೆ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ಪ್ರಕರಣದಿಂದ ಆಕ್ರೋಶಗೊಂಡಿದ್ದ ಉತ್ತರ ಪ್ರದೇಶದ ಜನತೆ, ಕಲ್ಲು ತೂರಾಟ ನಡೆಸುವ ಕಾಶ್ಮೀರಿಗಳು ಕೂಡಲೇ ಉತ್ತರ ಪ್ರದೇಶವನ್ನು ಬಿಟ್ಟು ತೊಲಗಬೇಕೆಂಬ ಹೋರ್ಡಿಂಗ್ ಗಳನ್ನು ಹಾಕಿದ್ದರು. 
ಈ ಎರಡೂ ಘಟನೆಗಳು ನಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳ ವಿರುದ್ಧ ನಡೆಯಬಹುದಾದ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com