ಮುಸ್ಲಿಮರಿಗೆ 'ಸೂಕ್ತ ಪ್ರಾತಿನಿಧ್ಯ' ನೀಡಿರುವುದು ಸಂವಿಧಾನ, ಪ್ರಸಾದ್ ಅಲ್ಲ: ಓವೈಸಿ

ದೇಶದಲ್ಲಿರುವ ಮುಸ್ಲಿಮರಿಗೆ 'ಸೂಕ್ತ ಪ್ರಾತಿನಿಧ್ಯ' ನೀಡಿರುವುದು ಸಂವಿಧಾನವೇ ಹೊರತು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು...
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಹೈದಾರಾಬಾದ್: ದೇಶದಲ್ಲಿರುವ ಮುಸ್ಲಿಮರಿಗೆ 'ಸೂಕ್ತ ಪ್ರಾತಿನಿಧ್ಯ' ನೀಡಿರುವುದು ಸಂವಿಧಾನವೇ ಹೊರತು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಶನಿವಾರ ಹೇಳಿದ್ದಾರೆ. 
ಮುಸ್ಲಿಮರು ಬಿಜೆಪಿಗೆ ಮತ ಹಾಕದಿದ್ದರೂ, ಕೇಂದ್ರ ಸರ್ಕಾರ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ ಎಂಬ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಮಗೆ ಸೂಕ್ತ ಪ್ರಾತಿನಿಧ್ಯ ನೀಡಿರುವುದು ನಮ್ಮ ಸಂವಿಧಾನವೇ ಹೊರತು ರವಿ ಶಂಕರ್ ಪ್ರಸಾದ್ ಅವರಲ್ಲ. ನಾವು ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದ್ದೇವೆ?...ನಾವು ಎಂದರೆ ಯಾರು...? ಸಂವಿಧಾನ ನಮಗೆ ನಮ್ಮ ಹಕ್ಕು ನೀಡಿದೆ. ಸಂವಿಧಾನವೇ ನಮ್ಮನ್ನು ರಕ್ಷಣೆ ಮಾಡುತ್ತಿದೆ ಎಂದು ಹೇಳಿದ್ದಾರೆ. 
ಸಂವಿಧಾನವೇ ಸರ್ವೋಚ್ಛವಾಗಿದೆ. ಸಂವಿಧಾನದ ಹಕ್ಕುಗಳನ್ನು ಅಭಿವೃದ್ಧಿಪಡಿಸುವುದರತ್ತ ರವಿ ಶಂಕರ್ ಪ್ರಸಾದ್ ಅವರು ಕೆಲಸ ಮಾಡುತ್ದಿದ್ದಾರೆ. ಪ್ರಜಾಪ್ರಭುತ್ವ ಭಾರತದಲ್ಲಿ, ನಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ. ಸಂವಿಧಾನ ಪರಮ ಶ್ರೇಷ್ಠವಾದದ್ದು ಎಂಬುದನ್ನು ರವಿ ಶಂಕರ್ ಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 
ಮೈಂಡ್ ಮೈನ್ ಶೃಂಗದಲ್ಲಿ ಮಾತನಾಡಿದ್ದ ರವಿ ಶಂಕರ್ ಪ್ರಸಾದ್ ಅವರು, ಮುಸ್ಲಿಂ ಸಮುದಾಯದವರು ನಮಗೆ ಮತ ಹಾಕುವುದಿಲ್ಲ. ಆದರೂ ನಾವು ಅವರಿಗೆ ಸರಿಯಾದ ಪ್ರಾತಿನಿಧ್ಯ ನೀಡಿದ್ದೇವೆಯೇ ಅಥವಾ ಇಲ್ಲವೇ? ರಾಷ್ಟ್ರದಲ್ಲಿ ನಮ್ಮ ಪಕ್ಷದ 13 ಮುಖ್ಯಮಂತ್ರಿಗಳಿದ್ದಾರೆ. ಕೈಗಾರಿಕೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ನಾವು ಸಂತ್ರಸ್ತರನ್ನಾಗಿ ಮಾಡಿದ್ದೇವೆಯೇ? ನಾವು ಅವರನ್ನು ಅಮಾನತು ಮಾಡಿದ್ದೇವೆಯೇ? ಎಂದು ಪ್ರಶ್ನಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com