ಭಾರತದಲ್ಲಿ ಕಳೆದ ಐದು ವರ್ಷದಲ್ಲಿ 6 ಲಕ್ಷ ಲೀಟರ್ ರಕ್ತ ವ್ಯರ್ಥ

ಭಾರತದಲ್ಲಿ ಕಳೆದ ಐದು ವರ್ಷದಲ್ಲಿ 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ...
ರಕ್ತ
ರಕ್ತ
ನವದೆಹಲಿ: ಭಾರತದಲ್ಲಿ ಕಳೆದ ಐದು ವರ್ಷದಲ್ಲಿ 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. 
ಭಾರತದ ಜನ ಸಂಖ್ಯೆ 125 ಕೋಟಿ ಇದ್ದು ಪ್ರತಿವರ್ಷ 12 ಮಿಲಿಯನ್ ಯೂನಿಟ್ ರಕ್ತವನ್ನು ಕ್ರೋಢಿಕರಿಸಬೇಕಿದೆ. ಆದರೆ ಒಂಬತ್ತು ಮಿಲಿಯನ್ ಯೂನಿಟ್ ರಕ್ತವನ್ನು ಮಾತ್ರ ಕ್ರೋಢಿಕರಿಸಲಾಗುತ್ತಿದ್ದು ಮೂರು ಮಿಲಿಯನ್ ಯೂನಿಟ್ ರಕ್ತದ ಕೊರತೆ ಇದೆ. ಆದರೆ ಬ್ಲಡ್ ಬ್ಯಾಂಕ್ ಹಾಗೂ ಆಸ್ಪತ್ರೆಗಳ ನಡುವಣ ಸಮನ್ವಯದ ಕೊರೆತೆಯಿಂದ ಕಳೆದ ಐದು ವರ್ಷದಲ್ಲಿ ಆರು ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 
ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸುರಕ್ಷಿತವಾಗಿ ಸಂಸ್ಕರಣೆ ಮಾಡಲಾಗದೆ ರಕ್ತವನ್ನು ವ್ಯರ್ಥ ಮಾಡಲಾಗುತ್ತಿದೆ. ಚೇತನ್ ಕೊಠಾರಿ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಏಮ್ಸ್ ನಿಯಂತ್ರಣ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದು ಇದರ ಅಡಿಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 
ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತ ಸಂಗ್ರಹಿಸುವವರು ಅದನ್ನು ಸುರಕ್ಷಿತವಾಗಿ ಸಂರಕ್ಷಿಸದೆ ಇರುವುದೇ ರಕ್ತ ವ್ಯರ್ಥವಾಗಲು ಕಾರಣವೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com