2015ರಲ್ಲಿ ಸುಮೈನಾ ಒವೈಸ್ ತಾಲಿಬ್ ಎಂಬುವವರನ್ನು ಮದುವೆಯಾಗಿದ್ದು ಕಳೆದ ವರ್ಷ ನವೆಂಬರ್ 28ರಂದು ತಲಾಖ್, ತಲಾಖ್, ತಲಾಖ್ ಎಂದು ಮೂರು ಸಲ ಸಂದೇಶ ಕಳುಹಿಸಿದ್ದರು. ನಮ್ಮ ಮದುವೆಯಾದ ನಂತರ ನನ್ನ ಪತಿಯ ರಕ್ಷಕರಾದ ಅಮ್ಮಾ ಜಾನ್ ಮಾಟ ಮಂತ್ರಗಳನ್ನು ಮಾಡುತ್ತಿದ್ದರು. ನಾನು ಮತ್ತು ಪತಿ ದುಬೈಯಲ್ಲಿ ತಿಂಗಳ ಕಾಲ ನೆಲೆಸಿದ್ದೆವು. ನಾವು ಹೈದರಾಬಾದಿಗೆ ಹಿಂತಿರುಗಿದ ನಂತರ ನನ್ನನ್ನು ಕೆಲಸದಾಳಿನಂತೆ ದುಡಿಸಿಕೊಂಡರು. ನನಗೆ ಸರಿಯಾಗಿ ಆಹಾರವನ್ನು ಕೂಡ ನೀಡುತ್ತಿರಲಿಲ್ಲ ಎಂದು ಸುಮೈನಾ ಹೇಳಿದ್ದಾರೆ.