ಶ್ರೀರಾಮ್ ಘೋಷಣೆ ಕೂಗದವರು ಇತಿಹಾಸ ಸೇರಲಿದ್ದಾರೆ ಹೇಳಿಕೆ: ಸ್ಪಷ್ಟನೆ ನೀಡಿದ ಬಿಜೆಪಿ ಅಧ್ಯಕ್ಷ

ಭಾರತ್ ಮಾತಾ ಕೀ ಜೈ ಮತ್ತು ಜೈ ಶ್ರೀರಾಮ್ ಘೋಷಣೆ ವಿರೋಧಿಸಿರುವವರು ಇತಿಹಾಸ ಪುಟ ಸೇರಲಿದ್ದಾರೆಂಬ ಹೇಳಿಕೆ ನೀಡಿದ ವಿವಾದ ಸೃಷ್ಟಿಸಿದ್ದ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಸೋಮವಾರ ತಮ್ಮ ಹೇಳಿಕೆಗೆ...
ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಕೋಲ್ಕತಾ: ಭಾರತ್ ಮಾತಾ ಕೀ ಜೈ ಮತ್ತು ಜೈ ಶ್ರೀರಾಮ್ ಘೋಷಣೆ ವಿರೋಧಿಸಿರುವವರು ಇತಿಹಾಸ ಪುಟ ಸೇರಲಿದ್ದಾರೆಂಬ ಹೇಳಿಕೆ ನೀಡಿದ ವಿವಾದ ಸೃಷ್ಟಿಸಿದ್ದ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಸೋಮವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. 
ಈ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ದಿಲೀಪ್ ಘೋಷ್ ಅವರು ಗುಜರಾತಿನಿಂದ ಗುವಾಹಟಿ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರೂ ಭಾರತ್ ಮಾತಾಕೀ ಜೈ ಮತ್ತು ಜೈ ಶ್ರೀರಾಮ್ ಎಂದು ಹೇಳಲೇಬೇಕು. ಅದವನ್ನು ವಿರೋಧಿಸುವವರು ಇತಿಹಾಸದಲ್ಲು ಹೂತುಹೋಗಲಿದ್ದಾರೆಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. 
ಈ ಹಿನ್ನಲೆಯಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ಇದು ವಿವಾದವಲ್ಲ. ಪಶ್ಚಿಮ ಬಂಗಾಳದಲ್ಲಿಂದು ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಬಂಗಾಳದಲ್ಲಿ ಜೈ ಶ್ರೀರಾಮ್ ಎಂದು ಕೂಗಬಾರದು, ರಾಮ ನವಮಿ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿರುವ ಜನತೆ ಜೈ ಶ್ರೀರಾಮ್ ಎಂದು ಕೂಗಬಾರದು. ಆದರೆ, ಪಾಕಿಸ್ತಾನ ಜಿಂದಾಬಾದ್ ಎಂದು ಜೋರಾಗಿ ಕೂಗಬಹುದು. ಹೀಗಾಗಿ ನಾನು ಈ ರೀತಿಯ ಹೇಳಿಕೆಯನ್ನು ನೀಡಿದ್ದೆ ಎಂದು ಹೇಲಿದ್ದಾರೆ. 
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಭಾರತೀಯ ರಾಜಕೀಯ ಇತಿಹಾಸ ಪುಟಕ್ಕೆ ಸೇರಿದ್ದಾರೆ. ಇದೇ ರೀತಿಯಲ್ಲಿಯೇ ಕಾಂಗ್ರೆಸ್ ಕೂಡ ಸೇರ್ಪಡೆಗೊಳ್ಳಲಿದೆ. ಭಾರತ್ ಮಾತಾ ಕಿ ಜೈ ಮತ್ತು ಜೈ ಶ್ರೀ ರಾಮ್ ಕೂಗದವರೂ ಕೂಡ ರಾಜಕೀಯ ಪಕ್ಷಗಳಂತೆಯೇ ಇತಿಹಾಸ ಪುಟಕ್ಕೆ ಸೇರಲಿದ್ದಾರೆಂದು ಹೇಳಿದ್ದೆ, ಹಬ್ಬದ ಸಮಯದಲ್ಲಿ ಸಂಪ್ರದಾಯಗಳನ್ನು ಪಾಲನೆ ಮಾಡಲು ಅನುಮತಿಗಳನ್ನು ನೀಡಲಾಗುತ್ತಿಲ್ಲ. ಸಂಪ್ರದಾಯ ಹಾಗೂ ಆಚರಣೆಗಳನ್ನು ಮುಂದುವರೆಸುವವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com