ರೂ.3 ಲಕ್ಷಕ್ಕೆ ಹೈದರಾಬಾದ್ ಮಹಿಳೆ ಮಾರಾಟ: ಸೌದಿಯಲ್ಲಿ ದೈಹಿಕ ಹಿಂಸೆ ಅನುವಿಭವಿಸುತ್ತಿರುವ ಮಹಿಳೆ

ರೂ.3 ಲಕ್ಷಕ್ಕೆ ಹೈದರಾಬಾದ್ ಮಹಿಳೆಯೊಬ್ಬರನ್ನು ಸೌದಿ ಅರೇಬಿಯಾಗೆ ಮಾರಾಟ ಮಾಡಲಾಗಿದ್ದು, ಸೌದಿಯಲ್ಲಿರುವ ಮಹಿಳೆ ಮಾನಸಿಕ ಹಾಗೂ ದೈಹಿಕ ಹಿಂಸೆ ಎದುರಿಸುತ್ತಿರುವ ಪ್ರಕರಣವೊಂದು...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಹೈದರಾಬಾದ್: ರೂ.3 ಲಕ್ಷಕ್ಕೆ ಹೈದರಾಬಾದ್ ಮಹಿಳೆಯೊಬ್ಬರನ್ನು ಸೌದಿ ಅರೇಬಿಯಾಗೆ ಮಾರಾಟ ಮಾಡಲಾಗಿದ್ದು, ಸೌದಿಯಲ್ಲಿರುವ ಮಹಿಳೆ ಮಾನಸಿಕ ಹಾಗೂ ದೈಹಿಕ ಹಿಂಸೆ ಎದುರಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 
ಹೈದರಾಬಾದ್ ನ ಬಾಬಾನಗರ ಸಿ ಬ್ಲಾಕ್ ನಿವಾಸಿಯಾಗಿರುವ ಸಲ್ಮಾ ಬೇಗಂ ಎಂಬುವವರನ್ನು, ಅಕ್ರಮ್ ಹಾಗೂ ಶಫಿ ಎಂಬ ಇಬ್ಬರು ಏಜೆಂಟ್ ಗಳು ರೂ.3 ಲಕ್ಷಕ್ಕೆ ಸೌದಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಮಾರಿದ್ದಾರೆಂದು ಮಹಿಳೆಯ ಪುತ್ರಿ ಹೇಳಿಕೊಂಡಿದ್ದಾರೆ. 
ನನ್ನ ತಾಯಿ ಸೌದಿಯಲ್ಲಿ ಹಿಂಸೆಯನ್ನು ಎದುರಿಸುತ್ತಿದ್ದಾರೆ. ಭಾರತಕ್ಕೆ ಮರಳಿ ಬರಲು ಆಕೆ ಇಚ್ಚಿಸುತ್ತಿದ್ದು, ಆಕೆಯನ್ನು ಖರೀದಿ ಮಾಡಿದ ಮಾಲೀಕ ಆಕೆಯನ್ನು ಬಿಡುತ್ತಿಲ್ಲ. ಈ ಬಗ್ಗೆ ಅಕ್ರಂ ಜೊತೆಗೆ ಮಾತುಕತೆ ನಡೆಸಿದ್ದೆ. ತಾಯಿಯನ್ನು ಕರೆದುಕೊಂಡು ಬರುವಂತೆ ಮನವಿ ಮಾಡಿದ್ದೆ. ಆದರೆ, ಆತ ಒಪ್ಪಲಿಲ್ಲ. ಈ ಬಗ್ಗೆ ನಾವು ಕಂಛಾನ್ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆದರೆ, ಪೊಲೀಸರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸಲ್ಮಾ ಬೇಗಂ ಪುತ್ರಿ ಸಮೀನಾ ಅವರು ಹೇಳಿದ್ದಾರೆ. 
ಅಕ್ರಂ ಜೊತೆ ಮಾತನಾಡುವಾಗ ನನ್ನ ತಾಯಿಯನ್ನು ರೂ.3 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ವಿಚಾರ ತಿಳಿದಿತ್ತು. ತಾಯಿಯನ್ನು ಖರೀದಿ ಮಾಡಿದ ವ್ಯಕ್ತಿ ಆಕೆಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ಹಿಂಸೆಯನ್ನು ನೀಡಲಾಗುತ್ತಿದೆ. ನನ್ನ ತಾಯಿ ನನಗೆ ವಾಯ್ಸ್ ಮೆಸೇಜ್ ನ್ನು ಕಳುಹಿಸಿದ್ದು, ಮಾಲೀಕ ನನ್ನನ್ನು ಬಿಡುತ್ತಿಲ್ಲ ಎಂದು ಹೇಳಿದ್ದರು. ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಿದರು ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ತಾಯಿಯನ್ನು ಮರಳಿ ಕರೆತಲು ಸಾಕಷ್ಟು ಶ್ರಮ ಪಡುತ್ತಿದ್ದೇನೆ. ತೆಲಂಗಾಣ ಹಾಗೂ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇನೆಂದು ಸಮೀನಾ ಹೇಳಿದ್ದಾರೆ. 
ಸಮೀನಾ ಮನವಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸ್ಪಂದನೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಮಹಿಳೆಯನ್ನು ರಕ್ಷಣೆ ಮಾಡುವಂತೆ ಹಾಗೂ ಆಕೆಯನ್ನು ಭಾರತಕ್ಕೆ ಕರೆ ತರುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ. ಪ್ರೊಟೆಕ್ಟರ್ ಜನರಲ್ ಗವರ್ನ್'ಮೆಂಟ್ ಆಫ್ ಇಂಡಿಯಾದ ಅಧಿಕಾರಿಗಳಿಗೂ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com