ಭಾರತದ ನೈಸಗಿಕ ರಬ್ಬರ್ ಉತ್ಪಾದನೆ ಶೇ.23 ರಷ್ಟು ಏರಿಕೆ!

2016-17 ನೇ ಸಾಲಿನಲ್ಲಿ ರಬ್ಬರ್ ಉತ್ಪಾದನೆ ನಿಗದಿತ ಗುರಿಯನ್ನೂ ದಾಟಿದ್ದು 6.90 ಲಕ್ಷ ಟನ್ ರಬ್ಬರ್ ಉತ್ಪಾದನೆಯಾಗಿದೆ.
ರಬ್ಬರ್ ಉತ್ಪಾದನೆ
ರಬ್ಬರ್ ಉತ್ಪಾದನೆ
ಕೊಚ್ಚಿ: 2016-17 ನೇ ಸಾಲಿನಲ್ಲಿ ರಬ್ಬರ್ ಉತ್ಪಾದನೆ ನಿಗದಿತ ಗುರಿಯನ್ನೂ ದಾಟಿದ್ದು 6.90 ಲಕ್ಷ ಟನ್ ರಬ್ಬರ್ ಉತ್ಪಾದನೆಯಾಗಿದೆ. 
6.54 ಲಕ್ಷ ಟನ್ ರಬ್ಬರ್ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ 2016-17 ನೇ ಸಾಲಿನಲ್ಲಿ ರಬ್ಬರ್ ಉತ್ಪಾದನೆ ಶೇ.23 ರಷ್ಟು ಏರಿಕೆಯಾಗಿದೆ. ಕಳೆದ 2 ದಶಕಗಳಲ್ಲಿನ ಉತ್ಪಾದನೆಯ ಪೈಕಿ ಈ ಬಾರಿಯ ಉತ್ಪಾದನೆ ಅತಿ ಹೆಚ್ಚಿನದ್ದಾಗಿದ್ದು, ಉತ್ಪಾದನೆ ಶೇ.67 ರಷ್ಟು ಏರಿಕೆಯಾಗಿದೆ. 
ಅಂತಾರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗಿದ್ದೂ ಸಹ ರಬ್ಬರ್ ಉತ್ಪಾದನೆ ಏರಿಕೆಯಾಗಲು ಕಾರಣವಾಗಿರುವ ಅಂಶಗಳಲ್ಲಿ ಒಂದಾಗಿದೆ. ಇನ್ನು ರಬ್ಬರ್ ಬಳಕೆಯೂ ಸಹ ಏರಿಕೆಯಾಗಿದ್ದು, ಶೇ.5 ರಷ್ಟು ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com