ಎಂಸಿಡಿ ಫಲಿತಾಂಶ: ಇದು ಮೋದಿ ಅಲೆ ಅಲ್ಲ, ಇವಿಎಂ ಅಲೆ- ಮತ್ತೆ ಆಪ್ ಕ್ಯಾತೆ

ಆಮ್ ಆದ್ಮಿ ಪಕ್ಷಕ್ಕೆ ಪ್ರತಿಷ್ಟೆಯ ಚುನಾವಣೆಯಾಗಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಬೀತು ಪಡಿಸಿದ್ದು, ಇದೀಗ ಇವಿಎಂ (ವಿದ್ಯುನ್ಮಾನ ಮತಯಂತ್ರ) ಕುರಿತಂತೆ ಆಮ್ ಆದ್ಮಿ ಪಕ್ಷ ಮತ್ತೆ ಕ್ಯಾತೆ...
ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಸಚಿವ ಗೋಪಾಲ್ ರಾಯ್
ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಸಚಿವ ಗೋಪಾಲ್ ರಾಯ್
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಪ್ರತಿಷ್ಟೆಯ ಚುನಾವಣೆಯಾಗಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಬೀತು ಪಡಿಸಿದ್ದು, ಇದೀಗ ಇವಿಎಂ (ವಿದ್ಯುನ್ಮಾನ ಮತಯಂತ್ರ) ಕುರಿತಂತೆ ಆಮ್ ಆದ್ಮಿ ಪಕ್ಷ ಮತ್ತೆ ಕ್ಯಾತೆ ತೆಗೆದಿದೆ. 
ಮೋದಿ ಅಲೆ ನಡುವೆಯೂ ಪಾಲಿಕೆ ಚುನಾವಣೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆಂದು ಹೇಳಿದ್ದ ಆದ್ಮಿ ಪಕ್ಷಕ್ಕೆ ಇಂದಿನ ಫಲಿತಾಂಶ ತೀವ್ರ ಮುಖಭಂಗವಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಮತ್ತೆ ಖ್ಯಾತೆ ತೆಗೆದಿರುವ ಆಮ್ ಆದ್ಮಿ ಪಕ್ಷ, ಇದು ಮೋದಿ ಅಲೆಯಲ್ಲ... ಕೇವಲ ಇವಿಎಂ ಅಲೆಯಷ್ಟೇ ಎಂದು ಆರೋಪಿಸಿದೆ. 
ಪಾಲಿಕೆ ಚುನಾವಣಾ ಫಲಿತಾಂಶದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಸಚಿವ ಗೋಪಾಲ್ ರಾಯ್ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುತ್ತಿರುವುದು ದೊಡ್ಡ ಪವಾಡವೇನಲ್ಲ. ಇವಿಎಂ ಗೋಲ್ ಮಾಲ್ ನಿಂದಾಗಿ ಬಿಜೆಪಿ ಗೆಲವು ಸಾಧಿಸಿದೆ ಎಂದು ಹೇಳಿದ್ದಾರೆ. 
ಬಿಜೆಪಿಯ ಈ ಮ್ಯಾಜಿಕ್ ಗೆಲುವಿಗೆ ಕಾರಣ ಇವಿಎಂ ಅಲೆಯೇ ಹೊರತು, ಮೋದಿ ಅಲೆಯಲ್ಲ. ಹಾಗಾಗಿ ಇವಿಎಂ ಅಲೆ ಮುಕ್ತ ಮಾಡುವ ಬಗ್ಗೆ ಇಡೀ ದೇಶದ ಜನತೆ ಚಿಂತನೆ ನಡೆಸಬೇಕಾದ ಸಮಯ ಎದುರಾಗಿದೆ. 
ಕಳೆದ 6 ವರ್ಷಗಳಿಂದಲೂ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಾಗಿದ್ದರೂ, ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುತ್ತಿದೆ ಎಂದರೆ, ಅದೇನೂ ಪವಾಡವಲ್ಲ. ಮೋದಿ ಅಲೆಯಿಂದ ಈ ಫಲಿತಾಂಶ ಬಂದಿಲ್ಲ. ಇವಿಎಂ ಅಲೆಯಿಂದ ಬಂದಿದೆ. 
ಈ ರೀತಿಯ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಲಿದೆ. ಅಂತಿನ ಫಲಿತಾಂಶದ ಹೊರಬಿದ್ದ ಬಳಿಕ ಆಪ್ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com