ದೆಹಲಿ ಫಲಿತಾಂಶ ಮೋದಿಯವರ 'ವಿಜಯರಥ'ವನ್ನು ಮುಂದೆ ಕರೆದೊಯ್ದಿದೆ: ಅಮಿತ್ ಶಾ
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಬಿಜೆಪಿ ಗೆಲುವು, ಜನರು ಮೋದಿ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿರುವುದನ್ನು ತೋರಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬುಧವಾರ ಹೇಳಿದ್ದಾರೆ...
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಬಿಜೆಪಿ ಗೆಲುವು, ಜನರು ಮೋದಿ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿರುವುದನ್ನು ತೋರಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬುಧವಾರ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿ ಫಲಿತಾಂಶ ಮೋದಿಯವರ ವಿಜಯ ರಥವನ್ನು ಮತ್ತಷ್ಟು ಮುಂದೆ ಕರೆದೊಯ್ದಿದೆ. ಈ ಗೆಲುವು ಬಿಜೆಪಿ ಸರ್ಕಾರದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಕಾರ್ಯಕ್ರಮದ ಗೆಲುವಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಗೆಲುವಿಗೆ ಕಾರಣರಾಜ ದೆಹಲಿ ದೆಹಲಿ ಜನತೆಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಎಂಸಿಡಿ ಚುನಾವಣಾ ಫಲಿತಾಂಶ ಬಿಜೆಪಿ ವಿಜಯರಥವನ್ನು ಮತ್ತಷ್ಟು ಮುಂದೆ ಸಾಗುವಂತೆ ಮಾಡಿದೆ. ನಕಾರಾತ್ಮಕ ರಾಜಕೀಯಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂಬುದನ್ನು ಈ ಮೂಲಕ ದೆಹಲಿ ಜನತೆ ಸಾಬೀತು ಪಡಿಸಿದ್ದಾರೆಂದು ತಿಳಿಸಿದ್ದಾರೆ.
ಇದೇ ವೇಳೆ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯವರಿಗೆ ಧನ್ಯವಾದ ಹೇಳಿದ ಅವರು ಇವಿಎಂ ಗೋಲ್ ಮಾಲ್ ಮಾಡಲಾಗಿದೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಪಕ್ಕೆ ಕಿಡಿಕಾರಿದರು.