ಸುಕ್ಮಾ ದಾಳಿ: ದೆಹಲಿ ಪಾಲಿಕೆ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ನಿರ್ಧಾರ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಸಾಧಿಸುತ್ತಿರುವ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿವಾಗಿದೆ. ಆದರೆ, ಚುನಾವಣಾ ಗೆಲುವಿನ ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ಬುಧವಾರ ತೀರ್ಮಾನಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಸಾಧಿಸುತ್ತಿರುವ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿವಾಗಿದೆ. ಆದರೆ, ಚುನಾವಣಾ ಗೆಲುವಿನ ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ಬುಧವಾರ ತೀರ್ಮಾನಿಸಿದೆ. 
ಛತ್ತೀಸ್ಗಢದ ಸುಕಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ 25 ಸಿಆರ್'ಪಿಎಫ್ ಯೋಧರು ಹುತಾತ್ಮರಾಗಿದ್ದು, ಯೋಧರಿಗೆ ಗೌರವ ಸಲ್ಲಿಸಿರುವ ಬಿಜೆಪಿ ಚುನಾವಣಾ ಸಂಭ್ರಮಾಚರಣೆ ಕೈಬಿಡಲು ನಿರ್ಧಾರ ಕೈಗೊಂಡಿದೆ. 
ಈ ಕುರಿತಂತೆ ಮಾತನಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯವರು, ಸುಕ್ಮಾ ದಾಳಿ ಹಿನ್ನಲೆಯಲ್ಲಿ ಚುನಾವಣೆಯ ಸಂಭ್ರಮಾಚರಣೆ ಮಾಡದಿರಲು ನಿರ್ಧಾರ ಕೈಕೊಳ್ಳಲಾಗಿದೆ. ಸಂಭ್ರಮಾಚರಣೆ ಮಾಡಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. 
ಛತ್ತೀಸ್ಗಢ ರಾಜ್ಯದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕಾರ್ಯವನ್ನು ಮಾಡುತ್ತಿದ್ದರು ಈ ವೇಳೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುತ್ತಿದ್ದರೆ. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com