ಒಡಿಶಾ ಕರಾವಳಿಯಲ್ಲಿ ಅಗ್ನಿ-3 ಅಣು ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಭಾರತೀಯ ಸೇನೆ ಒಡಿಶಾ ಕರಾವಳಿಯಲ್ಲಿ ಗುರುವಾರ ನೆಲದಿಂದ ನೆಲಕ್ಕೆ ನೆಗೆಯುವ ಅಗ್ನಿ-3 ಬ್ಯಾಲ್ಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭುವನೇಶ್ವರ: ಭಾರತೀಯ ಸೇನೆ ಒಡಿಶಾ ಕರಾವಳಿಯಲ್ಲಿ ಗುರುವಾರ ನೆಲದಿಂದ ನೆಲಕ್ಕೆ ನೆಗೆಯುವ ಪರಮಾಣು ಸಾಮರ್ಥ್ಯ ಹೊಂದಿರುವ ಅಗ್ನಿ-3 ಬ್ಯಾಲ್ಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಾಡಿದೆ.
ದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಕ್ಷಿಪಣಿಯನ್ನು ಮೊಬೈಲ್ ಲಾಂಚರ್ ಮೂಲಕ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್) ಉಡಾವಣಾ ಕಾಂಪ್ಲೆಕ್ಸ್ ನಿಂದ ಇಂದು ಬೆಳಗ್ಗೆ 9.30ಕ್ಕೆ ಉಡಾವಣೆ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಕ್ಷಿಪಣಿಗೆ ಸೇನೆಯ ಕಾರ್ಯತಂತ್ರ ಪಡೆ ಕಮಾಂಡ್(ಎಸ್ಎಫ್ ಸಿ) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ತಾಂತ್ರಿಕ ಬೆಂಬಲ ನೀಡಿದ್ದು, ತರಬೇತಿಯ ಒಂದು ಭಾಗವಾಗಿ ಇಂದು ಅಗ್ನಿ-3 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿದೆ.
ಮಿಷನ್ ನಿಯಂತ್ರಣ ಕೊಠಡಿಯಿಂದ ವಿಜ್ಞಾನಿಗಳು ಮತ್ತು ಸೇನಾ ಸಿಬ್ಬಂದಿ ಈ ಕ್ಷಿಪಣಿಯ ಚಲನವಲನವನ್ನು ಗಮನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
17 ಮೀಟರ್‌ ಉದ್ದ ಹಾಗೂ 2 ಮೀಟರ್‌ ವ್ಯಾಸ ಹೊಂದಿರುವ ಇದು 2,200 ಕಿ.ಗ್ರಾಂ ತೂಕವಿದೆ. 3000ಕಿ.ಮೀ.ಗಿಂತಲೂ ದೂರದ ಗುರಿ ತಲುಪಬಲ್ಲ ಈ ಕ್ಷಿಪಣಿ 1.5 ಟನ್‌ ತೂಕದ ಪರಮಾಣು ಸಿಡಿತಲೆಯನ್ನೂ ಸಹ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com