ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1, ಹಿಮಾಚಲ ಪ್ರದೇಶಕ್ಕೆ ಕೊನೆಯ ಸ್ಥಾನ: ಸಮೀಕ್ಷೆ

ಕಳೆದೊಂದು ವರ್ಷದಲ್ಲಿ ಜನರು ಸಾರ್ವಜನಿಕ ಸೇವೆ ಪಡೆಯಲು ಅತಿ ಹೆಚ್ಚು ಲಂಚ ನೀಡಿದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇಕಡಾ 77 ಮಂದಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಕಳೆದೊಂದು ವರ್ಷದಲ್ಲಿ ಜನರು ಸಾರ್ವಜನಿಕ ಸೇವೆ ಪಡೆಯಲು ಅತಿ ಹೆಚ್ಚು ಲಂಚ ನೀಡಿದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇಕಡಾ 77 ಮಂದಿ ಲಂಚ ನೀಡಿದರೆ ಆಂಧ್ರ ಪ್ರದೇಶದಲ್ಲಿ ಶೇಕಡಾ 74, ತಮಿಳು ನಾಡು ಶೇಕಡಾ 68, ಮಹಾರಾಷ್ಟ್ರ ಶೇಕಡಾ 57, ಜಮ್ಮು-ಕಾಶ್ಮೀರ ಶೇಕಡಾ 44 ಮತ್ತು ಪಂಜಾಬ್ ನಲ್ಲಿ ಶೇಕಡಾ 42ರಷ್ಟು ಮಂದಿ ಲಂಚ ನೀಡಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ಒಂದು ವರ್ಷದಿಂದ ಸಾರ್ವಜನಿಕ ಸೇವೆಗಳಿಗೆ ಪ್ರತಿ ಮನೆಗಳಿಂದ ತಲಾ 10 ರೂಪಾಯಿಯಂತೆ ಲಂಚ ಹೋಗುತ್ತಿದ್ದು ಇದರ ಮೊತ್ತ ಕಳೆದೊಂದು ವರ್ಷದಲ್ಲಿ 6,350 ಕೋಟಿಯಷ್ಟಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸಿಎಂಎಸ್-ಭಾರತೀಯ ಭ್ರಷ್ಟಾಚಾರ ಅಧ್ಯಯನ(ಸಿಎಂಎಸ್-ಐಸಿಎಸ್)-2017ರ ಪ್ರಕಾರ, 1/3 ಭಾಗದಷ್ಟು ಮನೆಗಳು ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರದ ಅನುಭವ ಪಡೆಯುತ್ತಿದ್ದು 2005 ರಲ್ಲಿ ಶೇಕಡಾ 53ರಷ್ಟು ವರದಿಯಾಗಿದೆ.
ಈ ವರ್ಷ ಶೇಕಡಾ 43ರಷ್ಟು ಮನೆಗಳು ಸಮೀಕ್ಷೆಗೆ ಒಳಪಟ್ಟಿದ್ದು ಸಾರ್ವಜನಿಕ ಸೇವೆಗಳಲ್ಲಿನ ಭ್ರಷ್ಟಾಚಾರದ ಮಟ್ಟ ಕಳೆದೊಂದು ವರ್ಷದಲ್ಲಿ  ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
2005ಕ್ಕೆ ಹೋಲಿಸಿದರೆ ಪೊಲೀಸ್, ನ್ಯಾಯಾಂಗ ಸೇವೆಗಳಲ್ಲಿನ ಭ್ರಷ್ಟಾಚಾರದ ಮಟ್ಟ ಕಡಿಮೆಯಾಗಿದೆ. 20 ರಾಜ್ಯಗಳಲ್ಲಿ ಮನೆಗಳಲ್ಲಿ ಭ್ರಷ್ಟಾಚಾರದ ಮೊತ್ತ ಕಳೆದ ವರ್ಷ 6,350 ಕೋಟಿಯಷ್ಟಾಗಿದ್ದು, ಅದು 2005ರಲ್ಲಿ 20,500 ಕೋಟಿಯಷ್ಟಾಗಿತ್ತು.
ಅನೇಕ ರಾಜ್ಯಗಳಲ್ಲಿ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಹೋದರೆ 100ರಿಂದ 500 ರೂಪಾಯಿವರೆಗೆ ಸಣ್ಣ ಕೆಲಸಗಳಿಗೆ ಲಂಚ ನೀಡುತ್ತಾರೆ. ಆದರೆ ಕಳೆದ ವರ್ಷ ಸಾರ್ವಜನಿಕ ಸೇವೆಗೆ 10ರೂಪಾಯಿಯಿಂದ 50,000ದವರೆಗೆ ಲಂಚ ಪಡೆದ ಪ್ರಕರಣವೂ ನಡೆದಿದೆ.  
2005ರಲ್ಲಿ ಲಂಚದ ಪ್ರಮಾಣ ಬಿಹಾರದಲ್ಲಿ ಶೇಕಡಾ 74ರಷ್ಟು, ಜಮ್ಮು-ಕಾಶ್ಮೀರ ಶೇಕಡಾ 69, ಒಡಿಶಾ ಶೇಕಡಾ 60, ರಾಜಸ್ತಾನ ಶೇಕಡಾ 59 ಮತ್ತು ತಮಿಳುನಾಡಿನಲ್ಲಿ ಶೇಕಡಾ 59ರಷ್ಟಿತ್ತು. 
ಪ್ರಸ್ತುತ ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿ ಶೇಕಡಾ 3, ಕೇರಳ ಶೇಕಡಾ 4 ಮತ್ತು ಛತ್ತೀಸ್ ಗಢದಲ್ಲಿ ಶೇಕಡಾ 13ರಷ್ಟು ಲಂಚ ಪಡೆಯುವ ಪ್ರಮಾಣವಿದೆ. 2005ರಲ್ಲಿ ಕೇರಳದಲ್ಲಿ ಶೇಕಡಾ 35, ಮಹಾರಾಷ್ಟ್ರ ಶೇಕಡಾ 39 ಮತ್ತು ಗುಜರಾತ್ ಶೇಕಡಾ 43ರಷ್ಟಿದ್ದವು.20 ರಾಜ್ಯಗಳ 200 ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು 3,000ಕ್ಕೂ ಅಧಿಕ ಮನೆಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com