ಆಧ್ಯಾತ್ಮಿಕತೆಯ ಕೊರತೆ ಕೂಡ ರೈತರ ಆತ್ಮಹತ್ಯೆಗೆ ಒಂದು ಕಾರಣ: ರವಿಶಂಕರ್ ಗುರೂಜಿ

ಆದ್ಯಾತ್ಮಿಕತೆಯ ಕೊರತೆ ಕೂಡ ರೈತರ ಆತ್ಮಹತ್ಯೆಗೆ ಒಂದು ಕಾರಣ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಆದ್ಯಾತ್ಮಿಕತೆಯ ಕೊರತೆ ಕೂಡ ರೈತರ ಆತ್ಮಹತ್ಯೆಗೆ ಒಂದು ಕಾರಣ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಗುರೂಜಿ ಅವರು, ನಾವು ಮಹಾರಾಷ್ಟ್ರದ ವಿದರ್ಭದಲ್ಲಿ ಸುಮಾರು 512 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇವೆ. ಈ  ವೇಳೆ ನಮಗೆ ಕಂಡುಬಂದ ವಿಚಾರವೆಂದರೆ ರೈತರ ಆತ್ಮಹತ್ಯೆಗೆ ಕೇವಲ ಬಡತನ ಒಂದೇ ಕಾರಣವಲ್ಲ, ಅವರಲ್ಲಿನ ಆದ್ಯಾತ್ಮಿಕತೆಯ ಕೊರತೆ ಕೂಡ ಆತ್ಮಹತ್ಯೆಗೆ ಕಾರಣ ಎಂದು ಹೇಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ರೈತ ವರ್ಗದಲ್ಲಿ ಆಧ್ಯಾತ್ಮಿಕತೆ ಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಯೋಗ ಮತ್ತು ಪ್ರಾಣಾಯಾಮಗಳು ರೈತರಲ್ಲಿ ಬೆಳೆಯಬಹುದಾದ ಆತ್ಮಹತ್ಯಾ ಪ್ರವೃತ್ತಿಯನ್ನು  ತಡೆಗಟ್ಟಲು ನೆರವಾಗುತ್ತದೆ ಎಂದು ಹೇಳಿದರು.

ಹಸಿರು ನ್ಯಾಯಾಧಿಕರಣ ಹಾಗೂ ಆರ್ಟ್ ಆಫ್ ಲಿವಿಂಗ್ ವಿವಾದ; ಸತ್ಯಕ್ಕೆ ಜಯ ಸಿಗಲಿದೆ ಎಂದ ರವಿಶಂಕರ್ ಗುರೂಜಿ
ಇದೇ ವೇಳೆ ಯಮುನಾ ನದಿ ದಂಡೆಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವ ನಿಮಿತ್ತ ಆರ್ಟ್ ಆಫ್ ಲಿವಿಂಗ್ ಮತ್ತು ಹಸಿರು ನ್ಯಾಯಾಧಿಕರಣದ ನಡುವಿನ ತಿಕ್ಕಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಶಂಕರ್ ಗುರೂಜಿ  ಅವರು, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ಅಪಾರ ನಂಬಿಕೆ ಇದ್ದು, ಅಂತಿಮವಾಗಿ ಸತ್ಯಕ್ಕೆ ಜಯಸಿಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com