25 ಯೋಧರ ಹತ್ಯೆ ನಡೆಸಿದ್ದು ಲೈಂಗಿಕ ದೌರ್ಜನ್ಯದ ಸೇಡಿಗಾಗಿ: ನಕ್ಸಲರು

ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ 25 ಸಿಆರ್'ಪಿಎಫ್ ಯೋಧರ ನರಮೇಧ ನಡೆಸಿದ ಹೊಣೆಯನ್ನು ನಕ್ಸಲರು ಶುಕ್ರವಾರ ಹೊತ್ತುಕೊಂಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ 25 ಸಿಆರ್'ಪಿಎಫ್ ಯೋಧರ ನರಮೇಧ ನಡೆಸಿದ ಹೊಣೆಯನ್ನು ನಕ್ಸಲರು ಶುಕ್ರವಾರ ಹೊತ್ತುಕೊಂಡಿದ್ದಾರೆ.

ನಿಷೇಧಿತ ದಂಡಕಾರಣ್ಯ ವಿಶೇಷ ವಲಯ ಸಮಿತಿ (ನಕ್ಸಲರು) ಈ ಆಡಿಯೋ ಟೇಪ್ ನ್ನು ಬಿಡುಗಡೆ ಮಾಡಿದ್ದು, ಆಡಿಯೋದಲ್ಲಿ 16 ನಿಮಿಷ 42 ಸೆಕೆಂಡ್ ಗಳ ಕಾಲ ಹಿಂದಿ ಭಾಷೆಯಲ್ಲಿ ಮಾತನಾಡಿ, ದಾಳಿ ಹಿಂದಿನ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.

ದಂಡಕಾರಣ್ಯ ವಿಶೇಷ ವಲಯ ಸಮಿತಿ (ನಕ್ಸಲರು)  ವಕ್ತಾರ ವಿಕಲ್ಪ ಎಂಬಾತ ದಾಳಿ ಕುರಿತಂತೆ ಮಾತನಾಡಿದ್ದು, ಸಿಆರ್"ಪಿಎಫ್ ಯೋಧರ ಮೇಲೆ ನಮಗೆ ಯಾವುದೇ ಶತ್ರುತ್ವವಿಲ್ಲ. 2016ರಲ್ಲಿ ನಮ್ಮ ನೆಲೆಗಳ ಮೇಲೆ ಭೀಕರ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಒಡಿಶಾದಲ್ಲಿ 21 ಮಂದಿ ಸಾವನ್ನಪ್ಪಿದ್ದರು.

ಬಿಕ್ಕಟ್ಟಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಭದ್ರತಾ ಪಡೆಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಗ್ರಾಮಸ್ಥರ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದೇವೆಂದು ಹೇಳಿದ್ದಾನೆ.

ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಭದ್ರತಾ ಪಡೆಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಗ್ರಾಮಸ್ಥರ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಲಾಗಿತ್ತು. ಆದರೆ, ನಕ್ಸಲರು ಯೋಧರ ದೇಹ ಕತ್ತರಿಸಿದ್ದರು ಎಂಬ ಆರೋಪ ಸುಳ್ಳು ಎಂದು ಹೇಳಿಕೊಂಡಿದ್ದಾನೆ.

ಯೋಧರು ಮೃತ ಮಹಿಳಾ ನಕ್ಸಲರ ಆಕ್ಷೇಪಾರ್ಹ ಚಿತ್ರ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ ಎಂದು ವಿಕಲ್ಪ ಕಿಡಿಕಾರಿದ್ದಾನೆ.

ಛತ್ತೀಸ್ಗಢ ರಾಜ್ಯದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕಾರ್ಯವನ್ನು ಮಾಡುತ್ತಿದ್ದರು ಈ ವೇಳೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುತ್ತಿದ್ದರೆ. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com