ಕುಮಾರ್ ವಿಶ್ವಾಸ್ ನನ್ನ ಚಿಕ್ಕ ತಮ್ಮ, ನಮ್ಮಿಬ್ಬರನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ: ಕೇಜ್ರಿವಾಲ್

ಪಾಲಿಕೆ ಚುನಾವಣೆ ಬಳಿಕ ಆಮ್ ಪಕ್ಷದಲ್ಲಿ ಬಿರುಕುಗಳು ಉಂಟಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ. ಬಿರುಕುಗಳ ಕುರಿತಂತೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸ್ಪಷ್ಟನೆ...
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್
ದೆಹಲಿ: ಪಾಲಿಕೆ ಚುನಾವಣೆ ಬಳಿಕ ಆಮ್ ಪಕ್ಷದಲ್ಲಿ ಬಿರುಕುಗಳು ಉಂಟಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ. ಬಿರುಕುಗಳ ಕುರಿತಂತೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ. 
ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಹಾಗೂ ಕೇಜ್ರಿವಾಲ್ ಅವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂಬ ಮಾತುಗಳ ಕುರಿತತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕುಮಾರ್ ವಿಶ್ವಾಸ್ ನನ್ನ ಚಿಕ್ಕ ತಮ್ಮ. ನಮ್ಮಿಬ್ಬರನ್ನು ಯಾರು ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಕುಮಾರ್ ನನ್ನ ಚಿಕ್ಕ ತಮ್ಮ. ಕೆಲ ಜನರು ನಮ್ಮಿಬ್ಬರ ನಡುವೆ ಬಿರುಕು ಮೂಡುಂತೆ ಮಾಡುತ್ತಿದ್ದಾರೆ. ಇಂತಹ ಜನರು ಬೆನ್ನಿನ ಹಿಂದಿರುವ ಶತ್ರುಗಳು. ಅಂತಹ ಶತ್ರುಗಳು ನಮ್ಮ ಮುಂದೆ ಬಂದರೂ ಕೂಡ ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 
ಪಾಲಿಕೆ ಚುನಾವಣೆಯಲ್ಲಿ ಆಮ್ಮ ಆದ್ಮಿ ಪಕ್ಷ ದಯನೀಯ ಸೋಲಿನ ಬಳಿಕ ಅರವಿಂದ ಕೇಜ್ರಿವಾಲ್ ಅವರನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದ ಕುಮಾರ್ ವಿಶ್ವಾಸ್ ಅವರು ಪಕ್ಷ ತೊರೆಯಲಿದ್ದಾರೆಂಬ ವದಂತಿಗಳು ಕೇಳಿ ಬಂದಿತ್ತು. 
ಚುನಾವಣೆ ಸೋಲಿನ ಬಳಿಕ ಎವಿಎಂ ವಿರುದ್ಧ ಕೇಜ್ರಿವಾಲ್ ಅವರು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಕೇಜ್ರಿವಾಲ್ ವಿರುದ್ಧವೇ ಮಾತನಾಡಿದ್ದ ವಿಶ್ವಾಸ್ ಅವರು, ಕೇವಲ ಮತಯಂತ್ರವನ್ನು ಮಾತ್ರ ತಪ್ಪಿತಸ್ಥ ಎನ್ನಲು ಸಾಧ್ಯವಿಲ್ಲ. ಪಕ್ಷದ ಕಾರ್ಯನೀತಿಯಲ್ಲಿ, ಅಭ್ಯರ್ಥಿ ನಿಶ್ಚಯದಲ್ಲಿ ಆದ ಲೋಪಗಳ ಕುರಿತು ಅವಲೋಕನ ನಡೆಸಬೇಕಿದೆ. ಆಮ್ ಆದ್ಮಿ ಪಕ್ಷ ಮತ್ತೊಂದು ಕಾಂಗ್ರೆಸ್ ಪಕ್ಷವಾಗಬಾರದು ಎಂದು ಹೇಳಿದ್ದರು. 
ಇದಲ್ಲದೆ, ಕೆಲ ದಿನಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸುದ್ದಿಗಳು ಓಡಾಡುತ್ತಿವೆ. ಕುಮಾರ್ ವಿಶ್ವಾಸ್ ಅವರು ಕೆಲ ಆಪ್ ಶಾಸಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ತಮ್ಮನ್ನೇ ಪಕ್ಷದ ಸಂಚಾಲಕನಾಗಿ ಮಾಡುವಂತೆ ಶಾಸಕರಿಗೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಜ್ರಿವಾಲ್ ಅವರು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com