ಮುಂಬೈ: ತಾಯಿಯನ್ನು ನೋಡಲು ಅಮೆರಿಕಾದಿಂದ ಬಂದ ಮಗನಿಗೆ ಕಂಡಿದ್ದು ಅಸ್ತಿ ಪಂಜರ!

1997 ರಿಂದ ಅಮೆರಿಕಾದಲ್ಲಿ ನೆಲೆಸಿದ್ದ ರಿತುರಾಜ್ ಸಹಾನಿ ಎಂಬ ವ್ಯಕ್ತಿ ತನ್ನ ತಾಯಿಯನ್ನು ನೋಡಲು ಮುಂಬೈಗೆ ಬಂದಿದ್ದಾರೆ. ಆದರೆ ಮುಂಬೈ ನ ಫ್ಲಾಟ್ ನಲ್ಲಿ ಆತನಿಗೆ ತನ್ನ ತಾಯಿಯ ಬದಲು ಆಕೆಯ ಅಸ್ತಿ ಪಂಜರ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮುಂಬೈ: 1997 ರಿಂದ ಅಮೆರಿಕಾದಲ್ಲಿ ನೆಲೆಸಿದ್ದ ರಿತುರಾಜ್ ಸಹಾನಿ ಎಂಬ ವ್ಯಕ್ತಿ ತನ್ನ ತಾಯಿಯನ್ನು ನೋಡಲು ಮುಂಬೈಗೆ ಬಂದಿದ್ದಾರೆ. ಆದರೆ ಮುಂಬೈ ನ ಫ್ಲಾಟ್ ನಲ್ಲಿ ಆತನಿಗೆ ತನ್ನ ತಾಯಿಯ ಬದಲು ಆಕೆಯ ಅಸ್ತಿ ಪಂಜರ ಕಂಡಿದೆ. 
ಮುಂಬೈ ನ ವೆಲ್ಸ್ ಕಾಟ್ ಸೊಸೈಟಿಯಲ್ಲಿ 10 ನೇ ಫ್ಲೋರ್ ನ ಫ್ಲಾಟ್ ನಲ್ಲಿ ರಿತುರಾಜ್ ಸಹಾನಿ ಮುಂಬೈ ನಲ್ಲಿರುವ ತಾಯಿಯ ಮನೆಗೆ ಬಂದಾಗ ಬಾಗಿಲು ತೆಗೆಯಲಿಲ್ಲ, ಕೀ ಮೇಕರ್ ನ ಸಹಾಯದಿಂದ ಮನೆಯೊಳಗೆ ಪ್ರವೇಶಿಸಿದ ರಿತು ರಾಜ್ ತಾಯಿ ಕಾಣುವ ಬದಲು ರೂಮ್ ನಲ್ಲಿ ಆಕೆಯ ಶವ ಕಂಡಿದೆ. 
ರಿತುರಾಜ್ ಅವರಿಗೆ ಸೇರಿದ ಫ್ಲಾಟ್  10 ನೇ ಮಹಡಿಯಲ್ಲಿದ್ದರಿಂದ ರಿತು ಅವರ ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿರಲಿಲ್ಲ. 2016 ರಲ್ಲಿ ರಿತುರಾಜ್ ಅವರ ತಾಯಿ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಕೇಳಿದ್ದರು ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಸಹಜ ಸಾವೆಂದು ತಿಳಿದುಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com